ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ-ತಮಿಳುನಾಡು ಅಡ್ಡಗಾಲು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ-ತಮಿಳುನಾಡು ಅಡ್ಡಗಾಲು
ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡುವುದಕ್ಕೆ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರು ಅಡ್ಡಗಾಲು ಹಾಕಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಳೆದ ಜೂನ್ 10ರಂದು ನಡೆದ ಭಾಷಾತಜ್ಞರ ಸಭೆಯಲ್ಲಿ ಸಮಿತಿಯ ಏಳು ಸದಸ್ಯರ ಪೈಕಿ ಐವರು ಭಾಷಾತಜ್ಞರು ಕನ್ನಡ ಮತ್ತು ತೆಲುಗಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಆದರೆ ಇದೀಗ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡುವುದನ್ನು ವಿರೋಧಿಸುತ್ತಲೇ ಬಂದಿದ್ದ ನೆರೆಯ ತಮಿಳುನಾಡು ಈಗ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ಅಡ್ಡಗಾಲು ಹಾಕಲು ಹೊರಟಿರುವುದು ತೊಡಕಾಗಿ ಪರಿಣಮಿಸಿದೆ.

ಶುಕ್ರವಾರ ಸಭೆ ಸೇರಲಿರುವ ಭಾಷಾತಜ್ಞರ ಸಮಿತಿ ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡಬೇಕೆಂಬ ಶಿಫಾರಸು ಮಾಡಲಿರುವುದು ಖಚಿತವಾಗುತ್ತಿರುವ ಬೆನ್ನಲ್ಲೇ ತಮಿಳುನಾಡು ಅಡ್ಡಗಾಲು ಹಾಕಿದೆ.

ಭಾಷಾ ತಜ್ಞರ ಸಮಿತಿಯ ಅರ್ಹತೆಯನ್ನೇ ಪ್ರಶ್ನಿಸಿ ಆರ್.ಗಾಂಧಿ ಎಂಬ ವಕೀಲರೊಬ್ಬರು ಗುರುವಾರ ಚೆನ್ನೈ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಮೂರು ವಾರಗಳೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಮತ್ತಷ್ಟು
ಗೊಬ್ಬರ ಖರೀದಿ: ರೈತರಿಗೆ 1 ಸಾವಿರ ಸಹಾಯಧನ
ಸರಣಿ ಸ್ಫೋಟ: ತನಿಖೆ ಚುರುಕು-ಪ್ರಗತಿ ಶೂನ್ಯ
ಬಜೆಟ್‌‌: ಯೋಜನೆ ಅನುಷ್ಠಾನಕ್ಕೆ ಸಿಎಂ ತಾಕೀತು
ಲೋಕಾಯುಕ್ತ ದಾಳಿ: ಕೋಟ್ಯಂತರ ರೂ.ಆಸ್ತಿ ಪತ್ತೆ
ಗಣಿ ಧಣಿಗಳಿಗೆ ಮಣೆ, ರೈತರಿಗೆ ಕಂಬಿ: ವಾಟಾಳ್
ವಿದ್ಯುತ್‌‌ನಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡಿಲ್ಲ: ಜೈರಾಮ್