ಮೂಲ ಒಪ್ಪಂದಕ್ಕೆ ವಿರುದ್ಧವಾಗಿ ನೈಸ್ ಕಂಪೆನಿಗೆ ಒಂದಿಂಚು ಜಾಗ ನೀಡಿದರೂ, ಪಶ್ಚಿಮ ಬಂಗಾಳದ ನಂದಿಗ್ರಾಮದ ರೀತಿಯಲ್ಲಿ ಉಗ್ರವಾದ ರೈತ ಚಳವಳಿ ನಡೆಸಬೇ ಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೈಸ್ ಕಂಪನಿ ಕೈಗೆತ್ತಿಕೊಂಡಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಕಾರಿಡಾರ್ ರಸ್ತೆಗೆ ಭೂಮಿ ನೀಡಿ ಸಾವಿರಾರು ರೈತರು ಬೀದಿ ಪಾಲಾಗಿದ್ದಾರೆ. ಇದರಿಂದ ರೈತರು ಸಿಡಿದೇಳುವ ಸ್ಥಿತಿ ತಲುಪಿದ್ದು, ಇವರ ಹೋರಾಟದ ನೇತೃತ್ವ ವಹಿಸಿಕೊಳ್ಳಲು ತಾನು ಸಿದ್ಧವಿರುವುದಾಗಿ ತಿಳಿಸಿದ್ದಾರೆ.
ಪ್ರಸ್ತುತ ಸರ್ಕಾರವೇ ಬೆಂಗಳೂರು-ಮೈಸೂರು ಮಧ್ಯೆ ಚತುಷ್ಟಥ ರಸ್ತೆಯನ್ನು ನಿರ್ಮಿಸಿದ್ದು, ಇದನ್ನು ಆರು ಪಥದ ರಸ್ತೆಯನ್ನಾಗಿ ಪರಿವರ್ತಿಸಲು ತಮ್ಮ ಸರ್ಕಾರದ ಅವಧಿಯಲ್ಲಿ ಅನುಮೋದನೆ ನೀಡಲಾಗಿದೆ. ಆದ್ದರಿಂದ ಈಗ ಎಕ್ಸ್‌ಪ್ರೆಸ್ ಕಾರಿಡಾರ್ ರಸ್ತೆಯ ಅಗತ್ಯ ಕಂಡುಬರುತ್ತಿಲ್ಲ. ಒಂದು ವೇಳೆ ರಸ್ತೆ ಮಾಡಬೇಕೆಂದರೆ ಒಪ್ಪಂದದ ಪ್ರಕಾರವೇ ಆಗಬೇಕು ಎಂದು ಅವರು ಪುನರುಚ್ಚರಿಸಿದ್ದಾರೆ.
|