ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬೆಂಗಳೂರು: ಮತ್ತೆ ಸಿಡಿದ ಬಾಂಬ್ ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಂಗಳೂರು: ಮತ್ತೆ ಸಿಡಿದ ಬಾಂಬ್ ?
ನಗರದ ನಾಗರಬಾವಿ ಸಮೀಪದ ತಿಪ್ಪೆಗುಂಡಿಯಲ್ಲಿ ಶುಕ್ರವಾರ ಏಕಾಏಕಿಯಾಗಿ ಬಾಂಬ್ ಸ್ಫೋಟಗೊಂಡಿದ್ದು, ಇದರಿಂದ ಯಾರಿಗೂ ಯಾವುದೇ ಅಪಾಯವಾಗಿಲ್ಲ, ಆದರೆ ಸ್ಫೋಟಗೊಂಡಿರುವುದು ಬಾಂಬ್ ಅಥವಾ ಪಟಾಕಿಯೇ ಎಂಬ ಬಗ್ಗೆ ಇನ್ನೂ ಖಚಿತಗೊಂಡಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಗರದ ನಾಗರಬಾವಿ ವೃತ್ತದ ತಿಪ್ಪೆಗುಂಡಿಯಲ್ಲಿ ಇಂದು ಮಧ್ಯಾಹ್ನದ ಸುಮಾರಿಗೆ ದೊಡ್ಡ ಪಟಾಕಿ ಸಿಡಿದ ಶಬ್ದವಾಯಿತು. ಇದರಿಂದ ಯಾರಿಗೂ ಅಪಾಯವಾಗಿಲ್ಲವಾದರೂ, ಜನತೆ ಆತಂಕಗೊಂಡಿದ್ದಾರೆ.

ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸ್ಫೋಟಕಕ್ಕೆ ಬಳಸಲಾಗಿರುವ ವಸ್ತುಗಳನ್ನು ಪರಿಶೀಲನೆ ನಡೆಸುತ್ತಿರುವ ಪೊಲೀಸರು ಇದು ಬಾಂಬ್ ಸ್ಫೋಟಕ್ಕೆ ಬಳಸಲಾಗಿರುವ ವಸ್ತುಗಳೇ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಅಲ್ಲದೆ, ಕಳೆದ ಬಾರಿಯೂ ಶುಕ್ರವಾರದಂದೆ ನಗರದಲ್ಲಿ ಬಾಂಬ್ ಸ್ಫೋಟ ನಡೆದಿದ್ದರಿಂದ ಜನತೆ ಭಯಭೀತಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಘಟನಾಸ್ಥಳಕ್ಕೆ ಹಿರಿಯ ಅಧಿಕಾರಿಗಳು ಆಗಮಿಸಿದ್ದು, ತೀವ್ರ ತನಿಖೆ ನಡೆಸುತ್ತಿದ್ದಾರೆ.
ಮತ್ತಷ್ಟು
ಗಣಿಗಾರಿಕೆ-ಹೈಕೋರ್ಟ್ ತೀರ್ಪಿಗೆ ಬದ್ದ: ಸಿಎಂ
ನೈಸ್:ನಂದಿಗ್ರಾಮದ ರೀತಿ ಹೋರಾಟ -ಎಚ್‌ಡಿಕೆ
ಅಮರನಾಥ್ ವಿವಾದ: 11 ರಿಂದ ರಾಜ್ಯದಲ್ಲಿ ಜೈಲ್‌‌ ಭರೋ
ಗಣಿಗಾರಿಕೆ ರಾಷ್ಟ್ರೀಕರಣಕ್ಕೆ ಹೈಕೋರ್ಟ್ ಸೂಚನೆ
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ-ತಮಿಳುನಾಡು ಅಡ್ಡಗಾಲು
ಗೊಬ್ಬರ ಖರೀದಿ: ರೈತರಿಗೆ 1 ಸಾವಿರ ಸಹಾಯಧನ