ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಗಣಿ-ಹೈಕೋರ್ಟ್ ತೀರ್ಪು ಪರಿಗಣಿಸಿ:ನಾಣಯ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಣಿ-ಹೈಕೋರ್ಟ್ ತೀರ್ಪು ಪರಿಗಣಿಸಿ:ನಾಣಯ್ಯ
ಗಣಿಗಾರಿಕೆ ರಾಷ್ಟ್ರೀಕರಣಗೊಳಿಸಬೇಕೆಂಬ ಹೈಕೋರ್ಟ್ ತೀರ್ಪನ್ನು ಗೌರವಿಸಿ ರಾಜ್ಯದ ಖನಿಜ ಸಂಪತ್ತನ್ನು ರಕ್ಷಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಶೀಘ್ರವೇ ಕ್ರಮ ಕೈಗೊಳ್ಳಬೇಕೆಂದು ವಿಧಾನಪರಿಷತ್‌ನ ಜೆಡಿಎಸ್ ನಾಯಕ ಎಂ.ಸಿ. ನಾಣಯ್ಯ ಆಗ್ರಹಿಸಿದ್ದಾರೆ.

ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳ ಹಿಂದೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಾಡಬೇಕಾಗಿರುವ ಕೆಲಸವನ್ನು ಹೈಕೋರ್ಟ್ ಈಗ ನೀಡಿದೆ. ಕೂಡಲೇ ಗಣಿಗಾರಿಕೆಯನ್ನು ನಿಷೇಧಿಸುವ ಕುರಿತು ತೀರ್ಮಾನ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.

ರಾಜ್ಯದಲ್ಲಿ ಗಣಿಗಾರಿಕೆ ನಡೆಸುತ್ತಿರುವುದರಿಂದ ಖನಿಜ ಸಂಪತ್ತು ಲೂಟಿಯಾಗುತ್ತಿದೆ. ಅರಣ್ಯ ನಾಶ, ತಾಪಮಾನದ ವೈಪರೀತ್ಯದಿಂದಾಗಿ ಮಾನವ ಸಂಕುಲವೇ ವಿನಾಶದ ಅಂಚಿಗೆ ತಲಪುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ದಿಟ್ಟತನ ತೋರಬೇಕು ಎಂದು ತಿಳಿಸಿದ್ದಾರೆ.

ಒಂದೊಮ್ಮೆ ಗಣಿಧಣಿಗಳನ್ನು ಒಲೈಸುವ ಸಲುವಾಗಿ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಮುಂದಾದರೆ ಬಿಜೆಪಿ ಸರ್ಕಾರ ಗಣಿಗಾರಿಕೆಯಲ್ಲಿ ಪಾಲುದಾರರು ಎಂದು ಪರಿಗಣಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಮತ್ತಷ್ಟು
ಬೆಂಗಳೂರು: ಮತ್ತೆ ಸಿಡಿದ ಬಾಂಬ್ ?
ಗಣಿಗಾರಿಕೆ-ಹೈಕೋರ್ಟ್ ತೀರ್ಪಿಗೆ ಬದ್ದ: ಸಿಎಂ
ನೈಸ್:ನಂದಿಗ್ರಾಮದ ರೀತಿ ಹೋರಾಟ -ಎಚ್‌ಡಿಕೆ
ಅಮರನಾಥ್ ವಿವಾದ: 11 ರಿಂದ ರಾಜ್ಯದಲ್ಲಿ ಜೈಲ್‌‌ ಭರೋ
ಗಣಿಗಾರಿಕೆ ರಾಷ್ಟ್ರೀಕರಣಕ್ಕೆ ಹೈಕೋರ್ಟ್ ಸೂಚನೆ
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ-ತಮಿಳುನಾಡು ಅಡ್ಡಗಾಲು