ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮಾರುತಿ-ಲಾರಿ ಡಿಕ್ಕಿ: ಇಬ್ಬರು ಸಾವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾರುತಿ-ಲಾರಿ ಡಿಕ್ಕಿ: ಇಬ್ಬರು ಸಾವು
ಮಾರುತಿ ಕಾರು ಹಾಗೂ ಲಾರಿಯೊಂದು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೂವರು ಗಂಭೀರ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.

ಜಿಲ್ಲೆಯ ಕುಣಿಗಲ್‌‌ನ ಎಡೆಯೂರು ಸಮೀಪ ರಾಷ್ಟ್ರೀಯ ಹೆದ್ದಾರಿ-48ರ ಸಿದ್ದಾಪುರ ಗೇಟ್ ಬಳಿ ಶುಕ್ರವಾರ ಈ ದುರ್ಘಟನೆ ಸಂಭವಿಸಿದ್ದು, ಮೃತರು ಬೆಂಗಳೂರಿನವರೆಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರಿನ ಕಲ್ಯಾಣ ನಗರದ ಗಿರೀಶ್ ಯಾದವ್ ಹಾಗೂ ರತ್ನಮ್ಮ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಕುಟುಂಬ ಸಮೇತರಾಗಿ ಸಮೀಪದ ದೇವಾಲಯಕ್ಕೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಲಾರಿ ಚಾಲಕನ ಅಜಾಗರೂಕತೆಯೇ ಈ ದುರ್ಘಟನೆಗೆ ಕಾರಣವಾಗಿದೆ ಎಂದು ಪ್ರಾಥಮಿಕ ಹಂತದ ತನಿಖೆಯಿಂದ ತಿಳಿದು ಬಂದಿದೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮತ್ತಷ್ಟು
ಶಾಸ್ತ್ರೀಯ ಸ್ಥಾನಮಾನ: ಕರವೇ ಆಕ್ರೋಶ
ದಿನಕರನ್ ಹೈಕೋರ್ಟ್ ನೂತನ ಮುಖ್ಯನ್ಯಾಯಮೂರ್ತಿ
ನೈಸ್ -ಪ್ರತಿರೋಧ ಎದುರಿಸಲು ಸಿದ್ಧ:ಸಿಎಂ
ಗಣಿ-ಹೈಕೋರ್ಟ್ ತೀರ್ಪು ಪರಿಗಣಿಸಿ:ನಾಣಯ್ಯ
ಬೆಂಗಳೂರು: ಮತ್ತೆ ಸಿಡಿದ ಬಾಂಬ್ ?
ಗಣಿಗಾರಿಕೆ-ಹೈಕೋರ್ಟ್ ತೀರ್ಪಿಗೆ ಬದ್ದ: ಸಿಎಂ