ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಭಯೋತ್ಪಾದನೆಗೆ ಕಾಂಗ್ರೆಸ್ ಕುಮ್ಮುಕ್ಕು:ಡಿವಿಎಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಯೋತ್ಪಾದನೆಗೆ ಕಾಂಗ್ರೆಸ್ ಕುಮ್ಮುಕ್ಕು:ಡಿವಿಎಸ್
ಭಯೋತ್ಪಾದಕರ ಜೊತೆ ಕಾಂಗ್ರೆಸ್ ಸಂಬಂಧ ಹೊಂದಿರುವ ಕಾರಣ ದೇಶದಲ್ಲಿ ಭಯೋತ್ಪಾದನೆ ಹೆಚ್ಚಾಗಲು ಕಾರಣವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಜೊತೆ ಭಯೋತ್ಪಾದಕರು ಸಂಪರ್ಕ ಹೊಂದಿರುವ ಕಾರಣದಿಂದಲೇ ದೇಶದಲ್ಲಿ ಭಯೋತ್ಪಾದಕರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಮೂಲಕ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಭಯೋತ್ಪಾದಕರು ಕಾಣಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಒಂದು ಕಡೆ ಕಾಂಗ್ರೆಸ್ ಪರೋಕ್ಷವಾಗಿ ಭಯೋತ್ಪಾದನೆಗೆ ಕುಮಕ್ಕು ನೀಡಿದರೆ, ಇನ್ನೊಂದೆಡೆ ಬಿಜೆಪಿ ಅದರ ನಿಗ್ರಹಕ್ಕೆ ಎಲ್ಲಾ ಬಗೆಯ ಕ್ರಮ ಕೈಗೊಂಡಿದೆ. ರಾಜ್ಯದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಂತಹ ಭಯೋತ್ಪಾದನಾ ಕೃತ್ಯ ತಡೆಗಟ್ಟಲು ಬಿಜೆಪಿ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ಹೆಚ್ಚಿನ ಸೌಲಭ್ಯ ನೀಡಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಬಿಜೆಪಿ ಸರ್ಕಾರದ ಅಭಿವೃದ್ದಿ ಕಾರ್ಯದಲ್ಲಿ ರಾಜಕಾರಣ ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಅವಧಿಯಲ್ಲಿ ಮಾಡಿದ ಸಾಧನೆಗೆ ಚುನಾವಣೆಯಲ್ಲಿ ಜನರು ತೀರ್ಪು ನೀಡಿದ್ದಾರೆ. ಈಗ ಮತ್ತೆ ನೈಸ್ ಕಂಪೆನಿ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುತ್ತೇನೆ ಎಂದು ಗುಡುಗಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದ್ದಾರೆ.
ಮತ್ತಷ್ಟು
ಮಾರುತಿ-ಲಾರಿ ಡಿಕ್ಕಿ: ಇಬ್ಬರು ಸಾವು
ಶಾಸ್ತ್ರೀಯ ಸ್ಥಾನಮಾನ: ಕರವೇ ಆಕ್ರೋಶ
ದಿನಕರನ್ ಹೈಕೋರ್ಟ್ ನೂತನ ಮುಖ್ಯನ್ಯಾಯಮೂರ್ತಿ
ನೈಸ್ -ಪ್ರತಿರೋಧ ಎದುರಿಸಲು ಸಿದ್ಧ:ಸಿಎಂ
ಗಣಿ-ಹೈಕೋರ್ಟ್ ತೀರ್ಪು ಪರಿಗಣಿಸಿ:ನಾಣಯ್ಯ
ಬೆಂಗಳೂರು: ಮತ್ತೆ ಸಿಡಿದ ಬಾಂಬ್ ?