ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಹುಸಿ ಬಾಂಬ್ ಭೀತಿ ಹುಟ್ಟಿಸಿದರೆ ಹುಷಾರ್ !
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹುಸಿ ಬಾಂಬ್ ಭೀತಿ ಹುಟ್ಟಿಸಿದರೆ ಹುಷಾರ್ !
ಹುಸಿ ಬಾಂಬ್ ಭೀತಿ ಹುಟ್ಟಿಸಲು ಪ್ರಯತ್ನಿಸುವವರಿಗೆ ಉಗ್ರ ಶಿಕ್ಷೆ ಕಾದಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಗೋಪಾಲ್ ಬಿ. ಹೊಸೂರ್ ತಿಳಿಸಿದ್ದಾರೆ.

ಜನರಲ್ಲಿ ಭೀತಿ ಹುಟ್ಟಿಸುವ ಸಲುವಾಗಿ ಪಟಾಕಿಯಂತಹ ವಸ್ತುಗಳನ್ನು ಸಿಡಿಸಿ ಅದನ್ನು ಬಾಂಬ್ ಎಂದು ಎಲ್ಲೆಡೆ ವದಂತಿ ಹಬ್ಬಿಸಲಾಗುತ್ತಿದೆ. ಇನ್ನು ಮುಂದೆ ಸಾರ್ವಜನಿಕರು ಇದಕ್ಕಾಗಿ ಕಳವಳಪಡುವ ಅಗತ್ಯವಿಲ್ಲ. ಈ ರೀತಿಯ ಕೃತ್ಯದಲ್ಲಿ ತೊಡಗುವ ಕಿಡಿಗೇಡಿಗಳ ವಿರುದ್ಧ ಉಗ್ರ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.

ಹುಸಿ ಬಾಂಬ್ ಕರೆ ಮಾಡಿದ ಕಿಡಿಗೇಡಿಗಳನ್ನು ಈಗಾಗಲೇ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ನಾಗರಿಕರು ಭೀತಿಗೆ ಒಳಗಾಗದಂತೆ ಅನುಮಾನಾಸ್ಪದ ವ್ಯಕ್ತಿಗಳ ಕುರಿತು ಪೊಲೀಸರಿಗೆ ಸರಿಯಾದ ಮಾಹಿತಿ ನೀಡಬೇಕು. ಇದರಿಂದ ಇಲ್ಲ ಸಲ್ಲದ ವದಂತಿಗಳಿಗೆ ಕಡಿವಾಣ ಹಾಕಬಹುದು. ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಸಜ್ಜುಗೊಂಡಿದ್ದು, ಸಲ್ಲದ ಭಯ ಹುಟ್ಟಿಸುವವರಿಗೆ ತಕ್ಕ ಪಾಠ ಕಲಿಸುತ್ತದೆ ಎಂದು ಎಚ್ಚರಿಸಿದರು.
ಮತ್ತಷ್ಟು
ಕೆಎಸ್ಆರ್‌‌ಟಿಸಿ-ಕಾರು ಡಿಕ್ಕಿ ಮೂವರ ಸಾವು
ನಿಗದಿತ ದಿನದಂದೇ ಬಿಬಿಎಂಪಿ ಚುನಾವಣೆ: ಅಶೋಕ್
ಅಮರನಾಥ್ ವಿವಾದದ ಬೆಂಕಿಗೆ ಬಿಜೆಪಿ ತುಪ್ಪ:ದೇವೇಗೌಡ
ಶಾಸ್ತ್ರೀಯ ಸ್ಥಾನಮಾನ:ರಾಜ್ಯಾದ್ಯಂತ ಪ್ರತಿಭಟನೆ
ತಮಿಳುನಾಡಿಗೆ ನೀರು-ರೈತರಿಗೆ ಅನ್ಯಾಯ: ಉಗ್ರಪ್ಪ
ಭಯೋತ್ಪಾದನೆಗೆ ಕಾಂಗ್ರೆಸ್ ಕುಮ್ಮುಕ್ಕು:ಡಿವಿಎಸ್