ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಅತುಲ್ ವಿವರಣೆ:ಪದ್ಮಪ್ರಿಯ ಪ್ರಕರಣಕ್ಕೆ ಹೊಸ ತಿರುವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅತುಲ್ ವಿವರಣೆ:ಪದ್ಮಪ್ರಿಯ ಪ್ರಕರಣಕ್ಕೆ ಹೊಸ ತಿರುವು
ಪದ್ಮಪ್ರಿಯಾ ಸಾವಿನ ಪ್ರಕರಣದಲ್ಲಿ ನನ್ನನ್ನು ಬಲಿಪಶುವನ್ನಾಗಿ ಮಾಡಲಾಗುತ್ತಿದೆ ಎಂದು ಪ್ರಕರಣದ ಪ್ರಮುಖ ಆರೋಪಿ ಅತುಲ್ ರಾವ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ವಿಚಾರಣೆಗೊಳಪಡಿಸಿದ ಸಂದರ್ಭದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ ಅವರು, ಈ ತನಿಖೆಯಲ್ಲಿ ನನ್ನ ವಿರುದ್ಧ ದಾಖಲಾಗಿರುವ ಹೇಳಿಕೆಗಳಲ್ಲಿ ಯಾವುದೇ ಹುರುಳಿಲ್ಲ. ತನಿಖೆ ನಡೆಸಿದ ಬಳಿಕ ಸಬ್ ಜೈಲ್‌‌ನಲ್ಲಿ ಹಿರಿಯ ಅಧಿಕಾರಿಗಳು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರಕರಣದ ಕುರಿತು ಮಾಹಿತಿ ನೀಡಿದ ಅತುಲ್, ಪದ್ಮಪ್ರಿಯಾ ಅವರಿಗೆ ಮನೆಯಲ್ಲಿ ಇರಲು ಇಷ್ಟವಿರಲಿಲ್ಲ. ಅವರ ಸ್ವ ಇಚ್ಛೆಯಿಂದ ದೆಹಲಿಗೆ ತೆರಳಿದ್ದರು. ಅಲ್ಲಿ ಮನೆ ಹಾಗೂ ಕಾರಿಗಾಗಿ 1.50 ಲಕ್ಷ ರೂ. ವೆಚ್ಚವಾಗಿದೆ ಎಂದು ಎಂದು ತಿಳಿಸಿದ್ದಾರೆ.

ಪದ್ಮಪ್ರಿಯಾ ಅವರು ದೆಹಲಿಯಲ್ಲಿ ವಾಸವಾಗಿದ್ದ ಸಂದರ್ಭದಲ್ಲಿ ಪೊಲೀಸರ ಸಮ್ಮುಖದಲ್ಲಿ ಅವರೊಂದಿಗೆ ದೂರವಾಣಿ ಮುಖೇನ ಮಾತುಕತೆ ನಡೆಸಿದ್ದೇನೆ. ಬಳಿಕ ಪೊಲೀಸ್ ಅಧಿಕಾರಿಗಳ ಜೊತೆಯಲ್ಲಿ ದೆಹಲಿಗೆ ತೆರಳಿದಾಗ ಬಾಗಿಲು ಮುಚ್ಚಿತು. ಇದರಿಂದ ವಾಪಸ್ ನಗರಕ್ಕೆ ಆಗಮಿಸಿದೆವು ಎಂದು ವಿವರಣೆ ನೀಡಿದ್ದಾರೆ. ಅಲ್ಲದೆ, ಮೇ.25ರಿಂದ ಪದ್ಮಪ್ರಿಯಾ ಸಾವಿನ ದಿನಗಳವರೆಗಿನ ಸಂಪೂರ್ಣ ಘಟನೆಯನ್ನು ಅತುಲ್ ಸಿಓಡಿಗೆ ತಿಳಿಸಿದ್ದಾರೆ.
ಮತ್ತಷ್ಟು
ಯಡಿಯೂರಪ್ಪ ಕೈಲಾಗದ ಮುಖ್ಯಮಂತ್ರಿ: ವಿಶ್ವನಾಥ್
ಬೆಂಗಳೂರು: 7 ದರೋಡೆಕೋರರ ಬಂಧನ
ಮಂಗಳೂರು ಗಲಭೆ ಅಮಾನವೀಯ ಕೃತ್ಯ: ದೇವೇಗೌಡ
ಸಾರಿಗೆ ಸಂಸ್ಥೆ ಖಾಸಗೀಕರಣ ಇಲ್ಲ: ಅಶೋಕ್
ಮಂಗಳೂರು: ಸಚಿವ ಪಾಲೇಮಾರ್‌ಗೆ ಘೇರಾವ್
ಹಿಂದೂಪರ ಸಂಘಟನೆ ನಿಷೇಧಕ್ಕೆ ಚಿಂತನೆ:ಮೊಯ್ಲಿ