ಮಂಗಳೂರಿನಲ್ಲಿ ನಡೆದ ಕೋಮುಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಶಪ್ ಡಾ.ಅಲೋಷಿಯಸ್ ಪೌಲ್ ಡಿಸೋಜಾ ಅವರು ಹಲವಾರ ವಿಷಯಗಳ ಕುರಿತು ಚರ್ಚೆ ನಡೆಸಿದ್ದು, ಕ್ರೈಸ್ತ್ ಸುವಾರ್ತೆ ಪಂಗಡದಿಂದ ರಾಜ್ಯಾದ್ಯಂತ ಧಾರ್ಮಿಕ ಒಗ್ಗಟ್ಟಿಗೆ ಧಕ್ಕೆಯಾಗುತ್ತಿರುವುದನ್ನು ಈ ಸಂದರ್ಭದಲ್ಲಿ ಇಬ್ಬರೂ ಒಮ್ಮತಾಭಿಪ್ರಾಯ ವ್ಯಕ್ತಪಡಿಸಿದರು.
ನ್ಯೂಲೈಫ್ ಪ್ರೊಟೆಸ್ಟೆಂಟ್ ಪಂಗಡದ ಒಂದು ಭಾಗವಾಗಿದೆ ಹಾಗೂ ನ್ಯೂ ಏಜ್ ಗುಂಪಿನ ವಿರೋಧಿ ಪಂಗಡವಾಗಿದ್ದು, ಇದು ಸಂಪ್ರದಾಯಸ್ಥ ಕ್ರೈಸ್ತ ಸಮುದಾಯದ ವಿರುದ್ಧವಾಗಿವೆ ಎಂದು ಬಿಶಪ್ ಅಭಿಪ್ರಾಯ ವ್ಯಕ್ತಪಡಿಸಿದರು.
ಆದರೆ ಸ್ಥಳೀಯ ಕ್ಯಾಥೋಲಿಕ್ ಸಮುದಾಯ, ನ್ಯೂಲೈಫ್ ಸಂಘಟನೆ ಮತಾಂತರದಲ್ಲಿ ತೊಡಗಿದೆ ಎಂದು ದೂರಿದ್ದು, ಭಜರಂಗದಳ ದಾಳಿ ನಡೆಸುತ್ತಿರುವುದಾಗಿ ಆರೋಪಿಸಿದೆ.
ಅಲ್ಲದೇ ನಾವು ಬಲವಂತದ ಮತಾಂತರವನ್ನು ಯಾವತ್ತೂ ಮಾಡಿಲ್ಲ,ಅದು ನಮ್ಮ ಕೆಲಸವೂ ಅಲ್ಲ ಎಂದು ಬಿಶಪ್ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಘಟನೆ ಕುರಿತಂತೆ ಹಿಂದೂ ಪರಿವಾರ ಸಂಘಟನೆಗಳಾದ ಭಜರಂಗದಳ ಮತ್ತು ಶ್ರೀರಾಮಸೇನೆಯನ್ನು ನಿಷೇಧಿಸುವ ಕುರಿತು ವಿವರಣೆ ನೀಡಲು ಅವರು ನಿರಾಕರಿಸಿದರು.
ಮತಾಂತರ ವಿರೋಧಿ ವಿವಾದದ ಕುರಿತು ಕ್ಯಾಥೋಲಿಕ್ ಮತ್ತು ನ್ಯೂಲೈಫ್ ಸೇರಿದಂತೆ ಇನ್ನಿತರ ಕ್ರೈಸ್ತ ಸಮುದಾಯದ ನಡುವಿನ ಭಿನ್ನತೆ ಬಗ್ಗೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಇದೀಗ ಪ್ರಾರ್ಥನಾ ಮಂದಿರಗಳ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಪೊಲೀಸರ ಮೇಲೆ ಒತ್ತಡ ಹೇರಲಾ ಗುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಇಡೀ ಕ್ರೈಸ್ತ ಸಮುದಾಯವನ್ನು ದಾಳಿ ಗುರಿಪಡಿಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತಾಂತರ ಕುರಿತಂತೆ ನ್ಯೂಲೈಫ್ ಭಾಗಿಯಾಗಿರುವ ಕುರಿತು ಮಾಹಿತಿ ಪಡೆಯುತ್ತಿರುವುದಾಗಿ ಹೇಳಿದ ಮುಖ್ಯಮಂತ್ರಿ,ಈ ಬಗ್ಗೆ ಬಿಶಪ್ ಸಹಾಯ ಅಗತ್ಯ ಎಂದು ಮನವಿ ಮಾಡಿಕೊಂಡ ಅವರು, ಬಿಶಪ್ ಕೂಡ ಅಸಹಾಯಕರಾಗಿದ್ದಾರೆ ಎಂದು ಹೇಳಿದರು.
ಏತನ್ಮಧ್ಯೆ ನ್ಯೂಲೈಫ್ ಸಂಘಟನೆ ಭೂಕಬಳಿಕೆ ಮತ್ತು ಬಲವಂತದ ಮತಾಂತರ ಮಾಡುತ್ತಿರುವ ಆರೋಪವನ್ನು ಬಲವಾಗಿ ವಿರೋಧಿಸಿದ್ದು,ತಾವು ಬಡವರ ಏಳಿಗೆಗಾಗಿ ದುಡಿಯುತ್ತಿರುವುದಾಗಿ ಸ್ಪಷ್ಟನೆ ನೀಡಿದೆ.
ನಮ್ಮದು ದೇಶಿಯ ಸಂಸ್ಥೆಯಾಗಿದ್ದು, ನಾವು ಅಧಿಕೃತವಾಗಿ ಪ್ರಪಂಚದ ಯಾವುದೇ ಕ್ರೈಸ್ತ ಸಂಘಟನೆಯೊಂದಿಗೆ ಸಂಬಂಧ ಹೊಂದಿಲ್ಲ ಎಂದು ಕರ್ನಾಟಕ ನ್ಯೂಲೈಫ್ ಪ್ರಾರ್ಥನಾ ಮಂದಿರದ ಪಾದ್ರಿ ವಿ.ಎಚ್.ಸ್ಯಾಮ್ಯುವೆಲ್ ತಿಳಿಸಿದರು.
|