ಮಂಗಳೂರಿನಲ್ಲಿ ನ್ಯೂಲೈಫ್ ಪ್ರಾರ್ಥನಾ ಮಂದಿರಗಳ ಮೇಲಿನ ದಾಳಿ ತಣ್ಣಗಾಗುತ್ತಿದ್ದಂತೆ,ಇಲ್ಲಿನ ಸಂಗಮೇಶ್ವರದಲ್ಲಿ ಮತ್ತೆ ಪ್ರಾರ್ಥನಾ ಮಂದಿರದ ಮೇಲೆ ಬುಧವಾರ ದಾಳಿ ನಡೆದಿದೆ.
ಜಿಲ್ಲೆಯ ಸಂಗಮೇಶ್ವರಪೇಟೆ ಗೋರಿಗಂಡಿ ಪ್ರಾರ್ಥನಾ ಮಂದಿರದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ. ಅಲ್ಲದೆ ದುಷ್ಕರ್ಮಿಗಳು ಮಂದಿರದಲ್ಲಿದ್ದ ಪುಸ್ತಕಗಳಿಗೆ ಬೆಂಕಿ ಹಚ್ಚಿದ್ದಾರೆ.
ಈ ನಡುವೆ ಕುದುರೆಮುಖ ಕಬ್ಬಿಣ ಅದಿರು ಕಾರ್ಖಾನೆ ಆವರಣದಲ್ಲಿರುವ ಪ್ರಾರ್ಥನಾ ಮಂದಿರದ ಮೇಲೆ ಕಲ್ಲು ಎಸೆದು ಹಾನಿಗೊಳಿಸಿದ್ದಾರೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಸಾರ್ವಜನಿಕರು, ತಪ್ಪಿತಸ್ಥರನ್ನು ಕೂಡಲೇ ಬಂದಿಸುವಂತೆ ಆಗ್ರಹಿಸಿದ್ದಾರೆ. ಈ ನಿಟ್ಟಿನಲ್ಲಿ ಅಹಿತರಕ ಘಟನೆ ನಡೆಯದಂತೆ ಹೆಚ್ಚಿನ ಬಿಗಿ ಬಂದೋ ಬಸ್ತ್ ಏರ್ಪಡಿಸಲಾಗಿದೆ.
|