ವೇಗನಿಯಂತ್ರಕ ಅಳವಡಿಕೆ ಕಡ್ಡಾಯ ಮಾಡಿರುವುದನ್ನು ವಿರೋಧಿಸಿ ಸೆ.20 (ನಾಳೆಯಿಂದ) ರಿಂದ ವಾಣಿಜ್ಯ ಸಾಗಣೆ ವಾಹನ ಮಾಲಿಕರು ರಾಜ್ಯಾದ್ಯಂತ ಮುಷ್ಕರ ಆರಂಭಿಸಲು ನಿರ್ಧರಿಸಿದ್ದಾರೆ.
ವೇಗ ನಿಯಂತ್ರಕ ಅಳವಡಿಕೆ ಕುರಿತ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಲಾರಿ ಮಾಲಿಕರ ತುರ್ತು ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಫೆಡರೇಷನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್ ಅಂಡ್ ಏಜೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ, ಕಟ್ಟಡ ಸಾಮಗ್ರಿ- ಸರಕು ಸಾಗಣೆ ವಾಹನ ಸೇರಿದಂತೆ ಎರಡು ಲಕ್ಷಕ್ಕೂ ಹೆಚ್ಚು ವಾಣಿಜ್ಯ ವಾಹನಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.
ಹಳೆಯ ವಾಹನಗಳಿಗೆ ವೇಗನಿಯಂತ್ರಕ ಅಳವಡಿಸಲು ಹಲವು ತೊಂದರೆಗಳಿವೆ. ರಾಷ್ಟ್ರವ್ಯಾಪಿ ಏಕರೂಪ ನೀತಿ ಜಾರಿಯಾಗದೆ ಕರ್ನಾಟಕದಲ್ಲಿ ಮಾತ್ರ ಅಳವಡಿಕೆ ಅಸಾಧ್ಯ. ಆದ್ದರಿಂದ ಮುಷ್ಕರದ ಹೊರತು ನಮಗೆ ಬೇರೆ ದಾರಿ ಇಲ್ಲದಂತಾಗಿದೆ ಎಂದು ಇದೇ ಸಂದರ್ಭದಲ್ಲಿ ಅಸೊಸಿಯೇಷನ್ ತಿಳಿಸಿದೆ.
|