ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಶಾಂತಿ ಸ್ಥಾಪಿಸಲು ವ್ಯಾಸ್ ಆಗ್ರಹ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶಾಂತಿ ಸ್ಥಾಪಿಸಲು ವ್ಯಾಸ್ ಆಗ್ರಹ
ಮಂಗಳೂರು,ಉಡುಪಿ ಸೇರಿದಂತೆ ರಾಜ್ಯಾದ್ಯಂತ ಶಾಂತಿ ಮರುಸ್ಥಾಪಿಸಿ ಕೋಮುಸೌಹಾರ್ದತೆಗೆ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಸರ್ಕಾರಕ್ಕೆ ರಾಷ್ಟ್ರೀಯ ಮಹಿಳಾ ಆಯೋಗ ಮನವಿ ಮಾಡಿದೆ.

ಗಿರಿಜಾ ವ್ಯಾಸ್ ನೇತೃತ್ವದ ರಾಷ್ಟ್ರೀಯ ಮಹಿಳಾ ಆಯೋಗ ಮಂಗಳೂರು ಸುತ್ತಮುತ್ತಲ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿ, ದಾಳಿಗೆ ಒಳಗಾದ ಪ್ರಾರ್ಥನಾ ಮಂದಿರಗಳ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಅಲ್ಲದೇ ಈ ಪ್ರದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ಕ್ರೈಸ್ತ ಸನ್ಯಾಸಿನಿಯರ ಮೇಲೆ ಪ್ರಕರಣ ದಾಖಲಿಸಿ ಅಮಾಯಕರನ್ನು ಬಂಧಿಸಲಾಗಿದೆ, ಅಂತಹವರನ್ನು ಶೀಘ್ರವೇ ಬಿಡುಗಡೆ ಮಾಡುವಂತೆ ಆಯೋಗ ಆಗ್ರಹಿಸಿದೆ.

ಪ್ರಾರ್ಥನಾ ಮಂದಿರದ ಮೇಲಿನ ಹಿಂಸಾಚರದ ವೇಳೆ ಪೊಲೀಸರು ಕೂಡ ಕಿಡಿಗೇಡಿಗಳಿಗೆ ಕುಮ್ಮಕ್ಕು ನೀಡಿ ಪಕ್ಷಪಾತದ ಧೋರಣೆ ತೋರಿರುವುದನ್ನು ವ್ಯಾಸ್ ಬಲವಾಗಿ ಖಂಡಿಸಿ, ಈ ಕುರಿತು ಸಮಗ್ರ ತನಿಖೆ ನಡೆಸಿ ಕೇಂದ್ರಕ್ಕೆ ವರದಿ ಒಪ್ಪಿಸುವುದಾಗಿ ಹೇಳಿದರು.
ಮತ್ತಷ್ಟು
ಸೆ.30ರಿಂದ ಲಾರಿ ಮುಷ್ಕರ: ಷಣ್ಮುಗಪ್ಪ
'ಬೆಳಗಾವಿ-ಬೆಳಗಾಂ': ಕೇಂದ್ರಕ್ಕೆ ಹೈಕೋರ್ಟ್ ನೋಟಿಸ್
ಬಾಲಕನ ಅಪಹರಣ ಪ್ರಕರಣ ಸುಖಾಂತ್ಯ
ಹೈವೇ ಯೋಜನೆಗೆ ಹೆಚ್ಚುವರಿ ಭೂಮಿ ಇಲ್ಲ: ಸಿಎಂ
ಕೋಮುವಾದಿಗಳ ವಿರುದ್ಧ ಒಗ್ಗೂಡಬೇಕು: ಬಂಗಾರಪ್ಪ
ಚಿಕ್ಕಮಗಳೂರಿನಲ್ಲಿ ಮತ್ತೆ ದಾಳಿ