ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > 'ಅರ್ಕಾವತಿ'-ಬಿಡಿಎ ನಿರ್ಣಯಕ್ಕೆ ಹೈಕೋಟ್ ತಡೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಅರ್ಕಾವತಿ'-ಬಿಡಿಎ ನಿರ್ಣಯಕ್ಕೆ ಹೈಕೋಟ್ ತಡೆ
ನಗರದ ಅರ್ಕಾವತಿ ಬಡಾವಣೆಗೆ ಸೇರಿದ 22.19 ಎಕರೆ ಭೂಮಿಯನ್ನು ಐಎಎಸ್ ಅಧಿಕಾರಿ ನೀರಜಾ ರಾಜ್‌‌ಕುಮಾರ್ ಅಧ್ಯಕ್ಷರಾಗಿರುವ ಸಂಸ್ಥೆಗೆ ವಹಿಸಿಕೊಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತೆಗೆದುಕೊಂಡಿರುವ ನಿರ್ಣಯಕ್ಕೆ ಹೈಕೋರ್ಟ್ ಗುರುವಾರ ತಡೆಯಾಜ್ಞೆ ನೀಡಿದೆ.

ಬಡಾವಣೆ ವ್ಯಾಪ್ತಿಯ ಜಕ್ಕೂರಿವ ಸರ್ವೇ ನಂಬರ್ 94/1ರ ಈ ಭೂಮಿಯನ್ನು ಮೆಟ್ರೊಪಾಲಿಟನ್ ಗೃಹನಿರ್ಮಾಣ ಸಹಕಾರ ಸಂಘಕ್ಕೆ ವರ್ಗಾಯಿಸಿರುವುದನ್ನು ಪ್ರಶ್ನಿಸಿ ಜೆ.ಎಂ. ಕೃಷ್ಣಪ್ಪ ಎಂಬುವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಈ ಆದೇಶ ಹೊರಡಿಸಿದ್ದಾರೆ.

ವಿವಾದಿತ ಬಡಾವಣೆಯ ಸ್ವಾಧೀನ ಪ್ರಕ್ರಿಯೆಗೆ 2005ರಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ಹಸಿರು ನಿಶಾನೆ ತೋರಿತ್ತು. ಇದನ್ನು ಪ್ರಶ್ನಿಸಿ ಮಾಲಿಕರು ಸುಪ್ರೀಂಕೋರ್ಟ್‌‌ಗೆ ವಿಶೇಷ ಮೇಲ್ಮನವಿ ಸಲ್ಲಿಸಿದ್ದಾರೆ.

ಈ ವಿವಾದ ಇನ್ನೂ ಇತ್ಯರ್ಥವಾಗಿಲ್ಲ. ಆದರೆ ಸಾಮೂಹಿಕ ಮಂಜೂರಾತಿ ಯೋಜನೆಯಡಿ ಸೊಸೈಟಿಗೆ ಜಮೀನು ಮಂಜೂರು ಮಾಡಲು 2006ರ ನವೆಂಬರ್ 7ರಂದು ಬಿಡಿಎ ತೀರ್ಮಾನ ತೆಗೆದುಕೊಂಡಿದೆ.

ಇದು ಕಾನೂನು ಬಾಹಿರ ಕ್ರಮವಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಡಿಎ ನಿರ್ಣಯ ಹಾಗೂ ಅದರ ಅನ್ವಯ ಮುಂದುವರಿಯಬೇಕಿದ್ದ ಪ್ರಕ್ರಿಯೆಗೆ ನ್ಯಾಯಮೂರ್ತಿಗಳು ತಡೆ ನೀಡಿದ್ದಾರೆ.
ಮತ್ತಷ್ಟು
ಶಾಂತಿ ಸ್ಥಾಪಿಸಲು ವ್ಯಾಸ್ ಆಗ್ರಹ
ಸೆ.30ರಿಂದ ಲಾರಿ ಮುಷ್ಕರ: ಷಣ್ಮುಗಪ್ಪ
'ಬೆಳಗಾವಿ-ಬೆಳಗಾಂ': ಕೇಂದ್ರಕ್ಕೆ ಹೈಕೋರ್ಟ್ ನೋಟಿಸ್
ಬಾಲಕನ ಅಪಹರಣ ಪ್ರಕರಣ ಸುಖಾಂತ್ಯ
ಹೈವೇ ಯೋಜನೆಗೆ ಹೆಚ್ಚುವರಿ ಭೂಮಿ ಇಲ್ಲ: ಸಿಎಂ
ಕೋಮುವಾದಿಗಳ ವಿರುದ್ಧ ಒಗ್ಗೂಡಬೇಕು: ಬಂಗಾರಪ್ಪ