ಶಿಕ್ಷಣ ಇಲಾಖೆಯನ್ನೇ ದಂಗುಪಡಿಸಿದ ನಕಲಿ ಶಿಕ್ಷಕರ ನೇಮಕ ಹಗರಣವನ್ನು ಸಿಓಡಿ ಪೊಲೀಸರು ಯಶಸ್ವಿಯಾಗಿ ಬಯಲಿಗೆಳೆದಿದ್ದಾರೆ.
ಈ ಸಂಬಂಧ ಸುಮಾರು 75 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಆನೇಕಲ್‌ನ ಶಿವಾನಂದ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 57 ಮಂದಿಯ ವಿರುದ್ಧ ವಂಚನೆ, ಮೋಸ, ಸುಳ್ಳು ದಾಖಲಾತಿ ನಡೆಸಿದ ಆರೋಪ ಎದುರಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಲಾಗಿದೆ ಎಂದು ಸಿಒಡಿ ಪೊಲೀಸ್ ಮಹಾನಿರ್ದೇಶಕ ಡಾ. ಅಜಯ್ ಕುಮಾರ್ ತಿಳಿಸಿದ್ದಾರೆ.
ಪ್ರಕರಣದ ಪ್ರಮುಖ ರೂವಾರಿ ಶಿವಾನಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅನೇಕ ಮಂದಿಗೆ ಶಿಕ್ಷಣ ಇಲಾಖೆಯಲ್ಲಿ ಕೆಲಸ ಕೊಡಿಸಿದ್ದ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ನಕಲಿ ಶಿಕ್ಷಕರ ಪ್ರಮಾಣ ಪತ್ರಗಳು ದೊರೆತ ನಂತರ ಸಿಓಡಿ ನಡೆಸಿದ ಕಾರ್ಯಾಚರಣೆಯಲ್ಲಿ ಇದರ ಮೂಲ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಯಿತು.
|