ಇತ್ತೀಚೆಗಷ್ಟೇ ಶಿವಮೊಗ್ಗದ ಸಮೀಪ ಪಶ್ಚಿಮಘಟ್ಟ ಭಾಗದಲ್ಲಿ ಕಾರ್ಯಾಚರಿಸುತ್ತಿದ್ದ ನಕ್ಸಲೀಯ ನಾಯಕ ಬಿ.ಕೆ.ಕೃಷ್ಣಮೂರ್ತಿ ಸೇರಿದಂತೆ ಮೂವರು ನಕ್ಸಲೀಯರ ಬಂಧನ ಪ್ರಕರಣ ರಹಸ್ಯವಾಗಿಯೇ ಉಳಿದಿದೆ.
ಮಲೆನಾಡು ಪ್ರಾಂತ್ಯದ ನಕ್ಸಲ್ ನಾಯಕ ಬಿ.ಜಿ.ಕೆ, ಹೊಸಗದ್ದೆ ಪ್ರಭು,ಮಂಡಗದ್ದೆ ಲತಾ ಸೇರಿದಂತೆ ಮೂರು ಮಂದಿಯನ್ನು ಪೊಲೀಸರು ಬಂಧಿಸಿರುವುದಾಗಿ ದಟ್ಟ ವದಂತಿ ಹಬ್ಬಿತ್ತು.
ಆದರೆ ಪೊಲೀಸ್ ಇಲಾಖೆ ಮಾತ್ರ ಶುಕ್ರವಾರದವರೆಗೂ ಈ ಮಾಹಿತಿಯನ್ನು ಖಚಿತಪಡಿಸಿಲ್ಲ,ಈ ಕುರಿತು ಬಹಳಷ್ಟು ರಹಸ್ಯವನ್ನು ಕಾಯ್ದಿಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಬಲ್ಲ ಮೂಲಗಳ ಪ್ರಕಾರ ನಕ್ಸಲೀಯರನ್ನು ಬಂಧಿಸಿರುವುದು ಹೌದು ಅವರನ್ನು ಹೆಚ್ಚಿನ ವಿಚಾರಣೆಗಾಗಿ ಮಂಗಳೂರಿಗೆ ಕರೆದೊಯ್ದಿದ್ದು, ಅಲ್ಲಿಂದ ಬೆಂಗಳೂರಿನ ಹಿರಿಯ ಅಧಿಕಾರಿಗಳ ಮುಂದೆ ಹಾಜರುಪಡಿಸುವ ಸಂಭವ ಇರುವುದಾಗಿ ನಂಬಲರ್ಹ ಮೂಲಗಲು ತಿಳಿಸಿವೆ.
|