ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಭಜರಂಗದಳ ಸಂಚಾಲಕ ಮಹೇಂದ್ರ ಬಂಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಜರಂಗದಳ ಸಂಚಾಲಕ ಮಹೇಂದ್ರ ಬಂಧನ
ಮಂಗಳೂರಿನ ಪ್ರಾರ್ಥನಾ ಮಂದಿರಗಳ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಜರಂಗದಳ ರಾಜ್ಯ ಸಂಚಾಲಕ ಮಹೇಂದ್ರ ಕುಮಾರ್ ಅವರನ್ನು ಶುಕ್ರವಾರ ತಡರಾತ್ರಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ವಿವಿಧೆಡ ನ್ಯೂಲೈಫ್ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ನಡೆಸಿರುವ ದಾಳಿಗೆ ಭಜರಂಗದಳವೇ ಹೊಣೆ ಎಂಬುದಾಗಿ ಮಹೇಂದ್ರ ಕುಮಾರ್ ಅವರು ಭಾನುವಾರ ಮಾಧ್ಯಮಗಳಿಗೆ ಅಧಿಕೃತ ಪ್ರಕಟಣೆ ನೀಡಿದ ಬಳಿಕ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಬಂಧಿತ ಮಹೇಂದ್ರ ಕುಮಾರ್ ಅವರ ವಿರುದ್ಧ ಕೋಮಸೌಹಾರ್ದತೆ ಕದಡಿದ ಮತ್ತು ಸಂಚು ಸೇರಿದಂತೆ153ಎ ಹಾಗೂ 120ಬಿ ಕಲಂ ಅನ್ವಯ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧನದ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದ ಮಹೇಂದ್ರ ಕುಮಾರ್‌ಗೆ ಅಕ್ಟೋಬರ್ 1 ರವರೆಗೆ ನ್ಯಾಯಾಂಗ ಬಂಧನ ವಿಧಿಸಿರುವುದಾಗಿ ಇಲಾಖೆ ತಿಳಿಸಿದೆ.

ಇದಕ್ಕೂ ಕೋಮುಹಿಂಸಾಚಾರದಿಂದ ಕಂಗೆಟ್ಟಿರುವ ಮಂಗಳೂರಿಗೆ ಬುಧವಾರಂದು ರಾಷ್ಟ್ರೀಯ ಮಹಿಳಾ ಆಯೋಗ ಭೇಟಿ ನೀಡಿ, ದಾಳಿಗೆ ಒಳಗಾಗಿರುವ ಪ್ರಾರ್ಥನಾ ಮಂದಿರಗಳನ್ನು ಪರಿಶೀಲಿಸಿದರು, ಈ ಸಂದರ್ಭದಲ್ಲಿ ಪೊಲೀಸರು ಕೂಡ ಕ್ರೈಸ್ತ ಸನ್ಯಾಸಿನಿಯರ ವಿರುದ್ಧ ನಡೆದುಕೊಂಡ ರೀತಿಯ ಬಗ್ಗೆ ಆಯೋಗ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಬಂಧಿಸಿದ ನಿರಪರಾಧಿಗಳನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿತ್ತು.

ಏತನ್ಮಧ್ಯೆ ಮಂಗಳೂರು ಸೇರಿದಂತೆ ರಾಜ್ಯಾದ್ಯಂತ ಪ್ರಾರ್ಥನಾ ಮಂದಿರಗಳ ಮೇಲಿನ ದಾಳಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಭಜರಂಗದಳದ ಸಂಚಾಲಕ ಮಹೇಂದ್ರಕುಮಾರ್ ಅವರನ್ನು ಬಂಧಿಸುವಂತೆ ಒತ್ತಡ ಹೇರಿತ್ತು.


ಬಿ.ಕೆ.ಸೋಮಶೇಖರ್ ನೇತೃತ್ವದಲ್ಲಿ ತನಿಖೆ: ರಾಜ್ಯದಲ್ಲಿ ನಡೆದಿರುವ ಪ್ರಾರ್ಥನಾ ಮಂದಿರಗಳ ಮೇಲಿನ ದಾಳಿಯ ತನಿಖೆಯನ್ನು ಸಿಓಡಿಗೆ ವಹಿಸಿರುವುದನ್ನು ಪ್ರತಿಪಕ್ಷಗಳು ತೀವ್ರವಾಗಿ ಆಕ್ಷೇಪವ್ಯಕ್ತಪಡಿಸಿರುವುದಕ್ಕೆ ಮಣಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶುಕ್ರವಾರ ದಾಳಿ ತನಿಖೆಯನ್ನು ಕರ್ನಾಟಕ ಮತ್ತು ಆಂಧ್ರ ಹೈಕೋರ್ಟ್‌‌ನ ನಿವೃತ್ತ ನ್ಯಾಯಾಧೀಶರಾದ ಬಿ.ಕೆ.ಸೋಮಶೇಖರ್ ಅವರ ನೇತೃತ್ವದಲ್ಲಿ ನಡೆಸಲಾಗುವುದು ಎಂದು ಘೋಷಿಸಿದ್ದರು.
ಮತ್ತಷ್ಟು
ಬಯಲಾಗದ ನಕ್ಸಲೀಯರ ಬಂಧನ ರಹಸ್ಯ
ಕೇಂದ್ರದ ಎಚ್ಚರಿಕೆ ನಿರ್ಧಾರ ತಡವಾಗಿದೆ: ಎಚ್‌‌ಡಿಕೆ
ಕೇಂದ್ರದ ಎಚ್ಚರಿಕೆ ರಾಜಕೀಯ ಪಿತೂರಿ: ಆಚಾರ್ಯ
ಬಿಬಿಎಂಪಿ ಚುನಾವಣೆ ಮುಂದೂಡಿಕೆಗೆ ರಾಜ್ಯ ಚಿಂತನೆ
ದಿವಾಕರ್ ಬಾಬು ಹೇಳಿಕೆ ಹುರುಳಿಲ್ಲದ್ದು: ರೆಡ್ಡಿ
ಗೋಲಿಬಾರ್ ಪ್ರಕರಣ: ಜಿಲ್ಲಾಧಿಕಾರಿಗೆ ಸಮನ್ಸ್