ರಾಜ್ಯದ ವಿವಿಧೆಡೆ ಪ್ರಾರ್ಥನಾ ಮಂದಿರಗಳ ಮೇಲೆ ನಡೆದ ದಾಳಿ ಮತ್ತು ಮುಂದುವರಿಯುತ್ತಿರುವ ದಾಳಿಯನ್ನು ತಡೆದು ಕೋಮು ಸೌಹಾರ್ದತೆಯನ್ನು ಕಾಪಾಡಲು ರಾಜ್ಯ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂಬ ಮಾಹಿತಿ ನೀಡುವಂತೆ ಕೇಂದ್ರ ಗೃಹ ಸಚಿವಾಲಯ ಶುಕ್ರವಾರ ಮತ್ತೊಂದು ಪತ್ರವನ್ನು ಕಳುಹಿಸಿದೆ.
ಇದು ಗುರುವಾರ ಬಂದ ಪತ್ರದ ಮಾದರಿಯಲ್ಲೇ ಇದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಸರ್ಕಾರ ಯಾವ ರೀತಿಯ ಕ್ರಮವನ್ನು ಅನುಸರಿಸಬೇಕು ಎಂಬ ಸ್ಪಷ್ಟ ನಿರ್ದೇಶನವನ್ನೂ ಅದರಲ್ಲಿ ನೀಡಲಾಗಿದೆ.
ಶುಕ್ರವಾ ಗೃಹ ಸಚಿವಾಲಯದ ಕಾರ್ಯದರ್ಶಿ ಮಧುಕರ್ ಗುಪ್ತ ಬರೆದಿರುವ ಪತ್ರವು, ಮೃಧು ಅಂಶವನ್ನು ಹೊಂದಿದ್ದರೂ, ರಾಜ್ಯ ಸರ್ಕಾರ ಕೋಮು ಗಲಭೆಯನ್ನು ಯಾವ ರೀತಿ ನಿಯಂತ್ರಿಸಬೇಕು ಎಂದು ಸೂಚಿಸುವ ಮೂಲಕ ಈ ಹಿಂದೆ ತೆಗೆದುಕೊಂಡಿರುವ ಕ್ರಮಗಳು ಪ್ರಯೋಜನಕಾರಿಯಾಗಿಲ್ಲ ಎನ್ನವ ಸಂಕೇತ ಇದರಲ್ಲಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಸಂವಿಧಾನದ 355ನೇ ವಿಧಿಯನ್ನು ಪ್ರಯೋಗಿಸುವ ಮುನ್ನ ಈ ಮಾದರಿಯಲ್ಲಿ ಎಚ್ಚರಿಕೆಯ ಪತ್ರವನ್ನು ಕೇಂದ್ರ ಸರ್ಕಾರ ರಾಜ್ಯಗಳಿಗೆ ಬರೆಯುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇಕ್ಕಟ್ಟಿನಲ್ಲಿ ಸಿಲುಕಿದೆ.
|