ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಪ್ರಾರ್ಥನಾ ಮಂದಿರ ಮೇಲೆ ಮತ್ತೆ ದಾಳಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಾರ್ಥನಾ ಮಂದಿರ ಮೇಲೆ ಮತ್ತೆ ದಾಳಿ
ಪ್ರಾರ್ಥನಾ ಮಂದಿರಗಳ ಮೇಲಿನ ದಾಳಿ ಮತ್ತೆ ಮುಂದುವರಿದಿದ್ದು, ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಠಾಣಾ ವ್ಯಾಪ್ತಿಯ ಮೂರ್ಜೆ ಸೈಂಟ್ ಕ್ಸೇವಿಯರ್ ಪ್ರಾರ್ಥನಾ ಮಂದಿರ ಮತ್ತು ಮಂಚೇನಹಳ್ಳಿಯ ಆನ್ಸರ್ ಕ್ರೈಸ್ತ ಪ್ರಾರ್ಥನಾ ಮಂದಿರಕ್ಕೆ ಕಲ್ಲು ತೂರಾಟ ನಡೆಸಿದ್ದಾರೆ.

ಬೆಳ್ತಂಗಡಿಯ ಕ್ಸೇವಿಯರ್ ಪ್ರಾರ್ಥನಾ ಮಂದಿರದ ಮೇಲೆ ಮುಂಜಾನೆ 2.30ರ ವೇಳೆ ಬೈಕ್‌‌ನಲ್ಲಿ ಆಗಮಿಸಿದ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ.

ಇದರಿಂದ ಪ್ರಾರ್ಥನಾ ಮಂದಿರ ಹಾನಿಗೊಳಗಾಗಿದೆ. ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದರೂ ಪೊಲೀಸರ ಸಮಯೋಚಿತ ಆಗಮನದಿಂದ ಹತೋಟಿಗೆ ತಂದರು.

ಒಟ್ಟಾರೆ ಪ್ರಾರ್ಥನಾ ಮಂದಿರದ ಮೇಲಿನ ದಾಳಿ ಪ್ರತಿಪಕ್ಷಗಳಿಗೆ ಆಯುಧ ಸಿಕ್ಕಂತಾಗಿದೆ. ಇದಕ್ಕೆ ತುಪ್ಪ ಸುರಿಯುವ ಕೆಲಸವನ್ನು ಕೇಂದ್ರ ಸರ್ಕಾರ ಕೂಡಾ ಮಾಡುತ್ತಿದೆ. ಮುಂದೆ ನಡೆಯುವ ಅನಾಹುತಗಳನ್ನು ತಡೆಯುವ ನಿಟ್ಟಿನಲ್ಲಿ ಈಗ ಪ್ರಾರ್ಥನಾ ಮಂದಿರಕ್ಕೆ ಪೊಲೀಸ್ ಭದ್ರತೆಯನ್ನು ಕೂಡಾ ನೀಡಲಾಗಿದೆ.
ಮತ್ತಷ್ಟು
ಕೇಂದ್ರದಿಂದ ರಾಜ್ಯಕ್ಕೆ ಮತ್ತೆ ಎಚ್ಚರಿಕೆ
ಭಜರಂಗದಳ ಸಂಚಾಲಕ ಮಹೇಂದ್ರ ಬಂಧನ
ಬಯಲಾಗದ ನಕ್ಸಲೀಯರ ಬಂಧನ ರಹಸ್ಯ
ಕೇಂದ್ರದ ಎಚ್ಚರಿಕೆ ನಿರ್ಧಾರ ತಡವಾಗಿದೆ: ಎಚ್‌‌ಡಿಕೆ
ಕೇಂದ್ರದ ಎಚ್ಚರಿಕೆ ರಾಜಕೀಯ ಪಿತೂರಿ: ಆಚಾರ್ಯ
ಬಿಬಿಎಂಪಿ ಚುನಾವಣೆ ಮುಂದೂಡಿಕೆಗೆ ರಾಜ್ಯ ಚಿಂತನೆ