ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮಂಗಳೂರು ಗಲಭೆ:ಅಮಾಯಕರ ಮೇಲೆ ಹಲ್ಲೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಂಗಳೂರು ಗಲಭೆ:ಅಮಾಯಕರ ಮೇಲೆ ಹಲ್ಲೆ
ಇತ್ತೀಚೆಗೆ ರಾಜ್ಯದ ಹಲವೆಡೆಗಳಲ್ಲಿ ನಡೆದಿರುವ ಪ್ರಾರ್ಥನಾ ಮಂದಿರಗಳ ಮೇಲಿನ ದಾಳಿಯನ್ನು ಖಂಡಿಸಿರುವ ಟ್ರಾನ್ಸ್‌ಪರೆನ್ಸಿ ಇಂಟರ್ ನ್ಯಾಷನಲ್ ಇಂಡಿಯಾ ಘಟಕ, ಪ್ರಕರಣದ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದೆ.

ಪೊಲೀಸರು ಅಮಾಯಕ ಹಾಗೂ ಕೆಲ ಧಾರ್ಮಿಕ ಮುಖಂಡರ ಮೇಲೆ ಲಾಠಿ ಚಾರ್ಜ್ ನಡೆಸಿದ್ದಾರೆ ಎಂದು ಘಟಕದ ಮುಖಂಡರು ಆರೋಪಿಸಿದ್ದಾರೆ.

ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಘಟಕದ ಅಧ್ಯಕ್ಷ ಹಾಗೂ ನಿವೃತ್ತ ನ್ಯಾಯಾಧೀಶ ಎಂ.ಎಫ್. ಸಲ್ಡಾನಾ, ಸಂಸದ ಎಚ್.ಟಿ. ಸಾಂಗ್ಲಿಯಾನ, ಬಾಲಿವುಡ್ ಚಿತ್ರರಂಗದ ನಿರ್ದೇಶಕ ಮಹೇಶ್ ಭಟ್ ಅವರುಗಳು ಘಟನೆಯನ್ನು ಖಂಡಿಸಿದ್ದು, ಅಮಾಯಕರನ್ನು ಬಂಧಿಸಿರುವ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸಾಂಗ್ಲಿಯಾನ, ಪ್ರಾರ್ಥನಾ ಮಂದಿರದ ಮೇಲೆ ದಾಳಿ ನಡೆದ ನಂತರ ಮಂಗಳೂರು ಪೊಲೀಸರು ತಮ್ಮ ಮೇಲೆ ಬರುವ ಆರೋಪವನ್ನು ತಿರುಚಿ ಹಾಕಲು ಅಮಾಯಕರ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ಶೀಘ್ರವೇ ಬಂಧನ ಕಾರ್ಯ ನಡೆಯಬೇಕೆಂದು ಸಂಘ ಇದೇ ವೇಳೆ ಆಗ್ರಹಿಸಿದ್ದಾರೆ.
ಮತ್ತಷ್ಟು
ನಾಳೆ ರಾಜ್ಯ ಒಕ್ಕಲಿಗರ ಸಂಘ ಚುನಾವಣೆ
ಮಹೇಂದ್ರ ಜಾಮೀನು ಅರ್ಜಿ ವಿಚಾರಣೆ ಮುಂದಕ್ಕೆ
355ರ ಅಡಿ ಕೇಂದ್ರ ಪತ್ರ ಕಳಿಸಿಲ್ಲ: ಆಚಾರ್ಯ
ಭಜರಂಗದಳ ನಿಷೇಧವಿಲ್ಲ: ಸಿಎಂ ಸ್ಪಷ್ಟನೆ
ರಾಜ್ಯಾದ್ಯಂತ ಲಾರಿ ಮುಷ್ಕರ ಆರಂಭ
ನಮಗೆ ಮುಖ್ಯಮಂತ್ರಿಯದ್ದೇ ಭಯ: ನ್ಯೂ ಲೈಫ್