ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮುತಾಲಿಕ್‌‌ ಬಂಧನಕ್ಕೆ ವಾರೆಂಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುತಾಲಿಕ್‌‌ ಬಂಧನಕ್ಕೆ ವಾರೆಂಟ್
ಧಾರವಾಡದಲ್ಲಿ ಇತ್ತೀಚೆಗೆ ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ಹೊತ್ತಿರುವ ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಅವರ ಬಂಧನಕ್ಕೆ ವಾರೆಂಟ್ ಹೊರಡಿಸಲಾಗಿದೆ. ಭೂಗತರಾಗಿರುವ ಅವರು ಕೆಲವು ಪ್ರಕರಣಗಳ ವಿಚಾರಣೆಗೆ ಸೋಮವಾರ ಇಲ್ಲಿನ ನ್ಯಾಯಾಲಯಕ್ಕೆ ಹಾಜರಾಗುವ ಸಾಧ್ಯತೆ ಇದೆ.

ಧಾರವಾಡ ಪ್ರಕರಣದಲ್ಲಿ ಅವರ ಮೇಲಿರುವ ವಾರೆಂಟ್‌‌ನಲ್ಲಿ ರಾಜ್ಯದ ಯಾವುದೇ ಭಾಗದಲ್ಲಿ ಮುತಾಲಿಕ್ ಸಾರ್ಜನಿಕವಾಗಿ ಕಾಣಿಸಿಕೊಂಡಲ್ಲಿ ಅವರನ್ನು ಬಂಧಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ. ಮುತಾಲಿಕ್ ಮಂಗಳೂರು ಬಂದ್‌‌ಗೂ ಕರೆ ನೀಡಿದ್ದರು. ಇದರೊಂದಿಗೆ ಅವರ ವಿರುದ್ಧ ಪ್ರಕರಣಗಳು ಕೂಡಾ ದಾಖಲಾಗಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಮುತಾಲಿಕ್ ಅವರನ್ನು ಬಂಧಿಸಬಾರದು ಎಂದು ಶ್ರೀರಾಮ ಸೇನೆ ಸರ್ಕಾರಕ್ಕೆ ಮನವಿ ಮಾಡಿದೆ. ಒಂದು ವೇಳೆ ಮುತಾಲಿಕ್ ಅವರನ್ನು ಬಂಧಿಸಿದರೆ ರಾಜ್ಯಾದ್ಯಂತ ಭುಗಿಲೇಳುವ ಅಶಾಂತಿಗೆ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರವೇ ಹೊಣೆ ಎಂದು ಶ್ರೀರಾಮ ಸೇನೆ ಮುಖಂಡ ಸಿದ್ಧಲಿಂಗಪ್ಪ ಎಚ್ಚರಿಕೆ ನೀಡಿದ್ದಾರೆ.
ಮತ್ತಷ್ಟು
ರೈಲಿನಲ್ಲಿ ಸ್ಫೋಟಕ ಸಾಗಣೆ:ಆಚಾರ್ಯ
ದೆಹಲಿಗೆ ರಾಜ್ಯದಿಂದಲೇ ಸ್ಫೋಟಕ: ಇಲಾಖೆ
ಪಠ್ಯದಲ್ಲಿ ಭಗವದ್ಗೀತೆ ಸಾರ: ಕಾಗೇರಿ
ಅಸ್ಸಾಂ-ಪಶ್ಚಿಮಬಂಗಾಳಕ್ಕೆ ನೋಟಿಸ್ ಯಾಕಿಲ್ಲ: ಸಿಎಂ
ಬೆಂಗಳೂರಿನಲ್ಲಿ 3 ಚರ್ಚ್‌ಗೆ ದಾಳಿ
ಮಂಗಳೂರು ಗಲಭೆ:ಅಮಾಯಕರ ಮೇಲೆ ಹಲ್ಲೆ