ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಪ್ರತಿಪಕ್ಷಗಳು ಬಾಯಿಮುಚ್ಚಿ ಕುಳಿತುಕೊಳ್ಳಲಿ: ಸಿಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರತಿಪಕ್ಷಗಳು ಬಾಯಿಮುಚ್ಚಿ ಕುಳಿತುಕೊಳ್ಳಲಿ: ಸಿಎಂ
ಪ್ರತಿಪಕ್ಷಗಳ ವಿರುದ್ಧ ಮುಖ್ಯಮಂತ್ರಿ ಮತ್ತೊಮ್ಮೆ ಕಿಡಿ ಕಾರಿದ್ದು, ನನ್ನನ್ನು ಕೆಣಕಿದರೆ ಪ್ರತಿಪಕ್ಷಗಳು ಮಾಡಿರುವ ಘನ ಕಾರ್ಯಗಳನ್ನು ಸಾಕ್ಷ್ಯಾಧಾರ ಸಮೇತ ಮುಂದಿನ ಉಪಚುನಾವಣೆಯಲ್ಲಿ ಜನತೆಯ ಮುಂದಿಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಭಾನುವಾರ ಬೆಳಿಗ್ಗೆ ಚರ್ಚ್ ಮೇಲೆ ನಡೆದ ದಾಳಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾಳಿಯ ವಿಚಾರವಾಗಿ ಪ್ರತಿಪಕ್ಷಗಳು ಹಗುರವಾಗಿ ಮಾತನಾಡುವುದನ್ನು ಬಿಟ್ಟು, ಬಾಯಿಮುಚ್ಚಿಕೊಂಡು ತಮ್ಮ ಕಾರ್ಯನಿರ್ವಹಿಸಿದರೆ ಒಳ್ಳೆಯದು ಎಂದು ಎಚ್ಚರಿಸಿದರು. ಪ್ರತಿಪಕ್ಷಗಳ ಟೀಕೆಗೆ ಅಂಜಿ ರಾಜೀನಾಮೆ ನೀಡುವುದಿಲ್ಲ ಎಂದರು.

ಮುಂದೆ ಮಾತನಾಡಿದ ಅವರು, 30 ವರ್ಷ ಬಿಜೆಪಿಯನ್ನು ಪ್ರತಿಪಕ್ಷದಲ್ಲಿ ಕೂರಿಸಿದ್ದ ರಾಜ್ಯದ ಜನತೆ ಈಗ ಕಾಂಗ್ರೆಸ್ಸನ್ನು ಪ್ರತಿಪಕ್ಷದಲ್ಲಿ ಕೂರಿಸಿ ಬಿಜೆಪಿಗೆ ಅಧಿಕಾರ ನೀಡಿದ್ದಾರೆ. ಕಾಂಗ್ರೆಸ್‌‌ಗೆ ಇದನ್ನು ಸಹಿಸಲಾಗುತ್ತಿಲ್ಲ.

ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಏನೆಲ್ಲಾ ಘಟನೆಗಳು ನಡೆದರೂ ಯಾವೊಬ್ಬ ಮುಖ್ಯಮಂತ್ರಿಯೂ ರಾಜೀನಾಮೆ ನೀಡಲಿಲ್ಲ. ಇದೇ ರೀತಿ ನಾನು ಕೂಡಾ ಆಡಳಿತ ನಡೆಸುವುದು ಶತಸಿದ್ಧ. ಆ ನಂತರ ಜನತೆ ಬಿಜೆಪಿ ವಿರುದ್ಧ ತೀರ್ಪು ನೀಡಿದರೆ ರಾಜೀನಾಮೆ ನೀಡುತ್ತೇನೆ ಎಂದು ಮುಖ್ಯಮಂತ್ರಿ ಗುಡುಗಿದ್ದಾರೆ.
ಮತ್ತಷ್ಟು
ಮುತಾಲಿಕ್‌‌ ಬಂಧನಕ್ಕೆ ವಾರೆಂಟ್
ರೈಲಿನಲ್ಲಿ ಸ್ಫೋಟಕ ಸಾಗಣೆ:ಆಚಾರ್ಯ
ದೆಹಲಿಗೆ ರಾಜ್ಯದಿಂದಲೇ ಸ್ಫೋಟಕ: ಇಲಾಖೆ
ಪಠ್ಯದಲ್ಲಿ ಭಗವದ್ಗೀತೆ ಸಾರ: ಕಾಗೇರಿ
ಅಸ್ಸಾಂ-ಪಶ್ಚಿಮಬಂಗಾಳಕ್ಕೆ ನೋಟಿಸ್ ಯಾಕಿಲ್ಲ: ಸಿಎಂ
ಬೆಂಗಳೂರಿನಲ್ಲಿ 3 ಚರ್ಚ್‌ಗೆ ದಾಳಿ