ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ರಾಷ್ಟ್ರಪತಿ ಆಡಳಿತ ಬರಲಿ: ದೇವೇಗೌಡ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಷ್ಟ್ರಪತಿ ಆಡಳಿತ ಬರಲಿ: ದೇವೇಗೌಡ
ಅಮಾಯಕ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಯುತ್ತಿರುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದಕ್ಕೆ ಸಾಕ್ಷಿ. ಇದರಿಂದಾಗಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕು ಎಂದು ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಅಲ್ಪಸಂಖ್ಯಾತರಿಗೆ ಹಾಗೂ ಅವರ ಧಾರ್ಮಿಕ ಕೇಂದ್ರಗಳಿಗೆ ರಕ್ಷಣೆ ಒದಗಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ.

ಇದರಿಂದ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಯುಂಟಾಗಿದೆ. ಸಂಘ ಪರಿವಾರದ ಕಾರ್ಯಕರ್ತರು ನಿರಾಂತಕವಾಗಿ ಪುಂಡಾಟಿಕೆ ನಡೆಸುತ್ತಿದ್ದಾರೆ ಈ ಸಂಬಂಧ ತಕ್ಷಣ ಗಮನ ನೀಡುವಂತೆ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಪತ್ರ ಬರೆದಿದ್ದೇನೆ ಎಂದರು.

ಅಲ್ಲದೇ ಬಜರಂಗದಳ ಕರ್ನಾಟಕದಲ್ಲಿ ಮಾತ್ರವಲ್ಲದೇ ಒರಿಸ್ಸಾದಲ್ಲೂ ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿಕೊಂಡಿದೆ. ಈ ಹಿಂದೆ ರಾಜಸ್ಥಾನ, ಮಧ್ಯಪ್ರದೇಶಗಳಲ್ಲೂ ಅಲ್ಪಸಂಖ್ಯಾತರ ಮೇಲೆ ಭಜರಂಗದಳ ದಬ್ಬಾಳಿಕೆ ನಡೆಸಿವೆ. ಇವುಗಳನ್ನು ಹಿಂದು ಸಂಘಟನೆಗಳೆಂದು ಕರೆಯುವುದು ಹೇಗೆ? ಆದರೂ ಬಿಜೆಪಿ ಇದನ್ನು ಪೋಷಿಸುತ್ತಿದೆ ಎಂದರು.

ದೇಶದ ಶಾಂತಿ ಕದಡುತ್ತಿರುವ ಭಜರಂಗದಳ ಮತ್ತು ಶ್ರೀರಾಮಸೇನೆಯನ್ನು ನಿಷೇಧಿಸಲು ಇದು ಸಕಾಲ. ಇಲ್ಲವಾದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತದ ಮೇಲೆ ಕಪ್ಪು ಚುಕ್ಕೆ ಬರುತ್ತದೆ ಎಂದರು.
ಮತ್ತಷ್ಟು
ಪ್ರತಿಪಕ್ಷಗಳು ಬಾಯಿಮುಚ್ಚಿ ಕುಳಿತುಕೊಳ್ಳಲಿ: ಸಿಎಂ
ಮುತಾಲಿಕ್‌‌ ಬಂಧನಕ್ಕೆ ವಾರೆಂಟ್
ರೈಲಿನಲ್ಲಿ ಸ್ಫೋಟಕ ಸಾಗಣೆ:ಆಚಾರ್ಯ
ದೆಹಲಿಗೆ ರಾಜ್ಯದಿಂದಲೇ ಸ್ಫೋಟಕ: ಇಲಾಖೆ
ಪಠ್ಯದಲ್ಲಿ ಭಗವದ್ಗೀತೆ ಸಾರ: ಕಾಗೇರಿ
ಅಸ್ಸಾಂ-ಪಶ್ಚಿಮಬಂಗಾಳಕ್ಕೆ ನೋಟಿಸ್ ಯಾಕಿಲ್ಲ: ಸಿಎಂ