ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ದಾಳಿಗೆ ಪೊಲೀಸ್ ವೈಫಲ್ಯ ಕಾರಣ: ಸಿಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದಾಳಿಗೆ ಪೊಲೀಸ್ ವೈಫಲ್ಯ ಕಾರಣ: ಸಿಎಂ
ರಾಜ್ಯದಲ್ಲಿ ಭಾನುವಾರ ಚರ್ಚ್‌‌ಗಳ ಮೇಲೆ ನಡೆದ ದಾಳಿಗೆ ಪೊಲೀಸ್ ವೈಫಲ್ಯವೇ ಕಾರಣ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ರಾಜ್ಯದಲ್ಲಿನ ಎಲ್ಲ ಪ್ರಾರ್ಥನಾ ಮಂದಿರಗಳ ಮೇಲೆ ಕಟ್ಟೆಚ್ಚರ ವಹಿಸುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ಮಾಡಲಾಗಿತ್ತು ಎಂದಿದ್ದಾರೆ.

ಗೃಹ ಮಂತ್ರಿ, ಡಿಜಿಪಿ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ಭಾನುವಾರ ಸಂಜೆ ಸಭೆ ನಡೆಸಿದ ಅವರು, ಮುಂದಕ್ಕೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಜಿಲ್ಲಾಡಳಿತಗಳಿಗೆ ಹಾಗೂ ಪೊಲೀಸ್ ಇಲಾಖೆಗೆ ಸೂಚಿಸಲಾಗಿತ್ತು. ಆದಾಗ್ಯೂ ಬೆಂಗಳೂರಿನಲ್ಲಿ ದಾಳಿ ನಡೆದಿರುವುದು ಪೊಲೀಸ್ ಇಲಾಖೆಯ ವೈಫಲ್ಯವನ್ನು ತೋರಿಸುತ್ತದೆ ಎಂದರು.

ಕರ್ನಾಟಕ ಉಗ್ರರ ಪಾಲಿಗೆ ಸ್ವರ್ಗವಾಗಿ ಮಾರ್ಪಟ್ಟಿದೆ ಎಂದು ಸಿಎಂ ಇದೇ ಸಂದರ್ಭದಲ್ಲಿ ಒಪ್ಪಿಕೊಂಡರು. ರಾಜ್ಯದಲ್ಲಿ ಸ್ಫೋಟಕ್ಕೆ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದ ಅವರು, ಸ್ಫೋಟಕಗಳು ರಾಜ್ಯದಿಂದ ಸರಬರಾಜಾಗುತ್ತಿದೆಯೇ ಎಂಬುದನ್ನು ತನಿಖೆ ನಡೆಸಲು ಪೊಲೀಸರಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಅಮಾನತು: ರಾಜರಾಜೇಶ್ವರಿ ನಗರದ ಚರ್ಚ್ ಮೇಲೆ ದಾಳಿ ನಡೆದಾಗ ಅಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆ ಸರಿಯಾದ ರೀತಿಯಲ್ಲಿ ಕರ್ತವ್ಯ ನಿಭಾಯಿಸದ ಪೇದೆಯನ್ನು ಕರ್ತವ್ಯ ಲೋಪದ ಅಡಿಯಲ್ಲಿ ಅಮಾನತು ಮಾಡಲಾಗಿದೆ ಎಂದು ಪೊಲೀಸ್ ಉನ್ನತಾಧಿಕಾರಿ ಶಂಕರ ಬಿದರಿ ಹೇಳಿದರು.
ಮತ್ತಷ್ಟು
ರಾಷ್ಟ್ರಪತಿ ಆಡಳಿತ ಬರಲಿ: ದೇವೇಗೌಡ
ಪ್ರತಿಪಕ್ಷಗಳು ಬಾಯಿಮುಚ್ಚಿ ಕುಳಿತುಕೊಳ್ಳಲಿ: ಸಿಎಂ
ಮುತಾಲಿಕ್‌‌ ಬಂಧನಕ್ಕೆ ವಾರೆಂಟ್
ರೈಲಿನಲ್ಲಿ ಸ್ಫೋಟಕ ಸಾಗಣೆ:ಆಚಾರ್ಯ
ದೆಹಲಿಗೆ ರಾಜ್ಯದಿಂದಲೇ ಸ್ಫೋಟಕ: ಇಲಾಖೆ
ಪಠ್ಯದಲ್ಲಿ ಭಗವದ್ಗೀತೆ ಸಾರ: ಕಾಗೇರಿ