ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬಳ್ಳಾರಿ:ರಂಜಾನ್ ನೂಕುನುಗ್ಗಲಿಗೆ ಇಬ್ಬರು ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಳ್ಳಾರಿ:ರಂಜಾನ್ ನೂಕುನುಗ್ಗಲಿಗೆ ಇಬ್ಬರು ಬಲಿ
ಇಲ್ಲಿನ ಸ್ಥಳೀಯ ಗಣಿ ಉದ್ಯಮಿಯೊಬ್ಬರು ರಂಜಾನ್ ಹಬ್ಬದ ಪ್ರಯುಕ್ತ ಬಡವರಿಗೆ ಬಟ್ಟೆ, ದವಸ ಧಾನ್ಯ ವಿತರಿಸುವಾಗ ನೂಕುನುಗ್ಗಲು ಉಂಟಾದ ಪರಿಣಾಮ ಕಾಲ್ತುಳಿತಕ್ಕೆ ಇಬ್ಬರು ಮಹಿಳೆಯರು ಮೃತಪಟ್ಟಿದ್ದು, 13 ಮಂದಿ ಗಾಯಗೊಂಡಿದ್ದಾರೆ.

ಶ್ಯಾಮಲಾ (28) ಹಾಗೂ ನೂರ್ ಜಹಾನ್ (60) ಸಾವನ್ನಪ್ಪಿದ್ದಾರೆ. ಎಂಬಿಟಿ ಮೈನ್ಸ್ ಕಂಪೆನಿಯ ಪಾಲುದಾರರಾಗಿರುವ ಇಕ್ಬಾಲ್ ಅಹ್ಮದ್ ಅವರ ನಿವಾಸದಲ್ಲಿ ಈ ದುರ್ಘಟನೆ ನಡೆದಿದೆ. ಹಲವು ವರ್ಷಗಳಿಂದ ಅವರು ರಂಜಾನ್ ಸಂದರ್ಭದಲ್ಲಿ ಬಡವರಿಗೆ ದವಸ ಧಾನ್ಯ ಹಾಗೂ ಬಟ್ಟೆಗಳನ್ನು ದಾನ ಮಾಡುವುದು ವಾಡಿಕೆ.

ಕಳೆದ 20 ದಿನಗಳಿಂದ ಇದೇ ರೀತಿ ದಾನ ಮಾಡುತ್ತಿದ್ದು, ಹಿಂದೂ-ಮುಸ್ಲಿಂ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ಅನೇಕ ಜನರು ಬಂದು ದಾನ ಪಡೆಯುತ್ತಿದ್ದರು. ಆದರೆ ಭಾನುವಾರ ಪಕ್ಕದ ಹಳ್ಳಿಗಳಿಂದಲೂ ಬಂದವರ ಸಂಖ್ಯೆ ಹೆಚ್ಚಿದ್ದು, ನೂಕು ನುಗ್ಗಲು ಉಂಟಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಗಾಯಗೊಂಡ ಜ್ಯೋತಿ, ಪರ್ವೀನ್, ಯಲ್ಲಪ್ಪ, ಶಾಕೀಲ್, ಲಕ್ಷ್ಮಮ್ಮ ಸೇರಿದಂತೆ ಗಾಯಗೊಂಡ ಇತರರು ವಿಜಯನಗರ ವೈದ್ಯ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮತ್ತಷ್ಟು
ದಾಳಿಗೆ ಪೊಲೀಸ್ ವೈಫಲ್ಯ ಕಾರಣ: ಸಿಎಂ
ರಾಷ್ಟ್ರಪತಿ ಆಡಳಿತ ಬರಲಿ: ದೇವೇಗೌಡ
ಪ್ರತಿಪಕ್ಷಗಳು ಬಾಯಿಮುಚ್ಚಿ ಕುಳಿತುಕೊಳ್ಳಲಿ: ಸಿಎಂ
ಮುತಾಲಿಕ್‌‌ ಬಂಧನಕ್ಕೆ ವಾರೆಂಟ್
ರೈಲಿನಲ್ಲಿ ಸ್ಫೋಟಕ ಸಾಗಣೆ:ಆಚಾರ್ಯ
ದೆಹಲಿಗೆ ರಾಜ್ಯದಿಂದಲೇ ಸ್ಫೋಟಕ: ಇಲಾಖೆ