ರಾಜಕೀಯ ದ್ವೇಷವನ್ನು ಹೈನುಗಾರಿಕೆಯ ಮೂಲಕ ಸಾಧಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕೆಎಂಎಫ್ ಅಧ್ಯಕ್ಷ ಮಾಜಿ ಸಚಿವ ರೇವಣ್ಣ ಅಖಾಡಕ್ಕೆ ಇಳಿದಿದ್ದು, ಹಾಲಿನ ದರ ಏರಿಸುವ ಕುರಿತು ಸರ್ಕಾರಕ್ಕೆ ಕೆಎಂಎಫ್ ಕಳುಹಿಸಿದ ಪ್ರಸ್ತಾಪನೆಯನ್ನು ಸರ್ಕಾರ ತಿರಸ್ಕರಿಸಿದೆ.
ಆದರೆ ಪಟ್ಟುಬಿಡದ ಕೆಎಂಎಫ್ ಹಾಲಿನ ದರ ಏರಿಸಿಯೇ ಸಿದ್ಧ ಎಂದಿದೆ. ಈ ಕುರಿತು ಸೆ. 30 ರಂದು ಮತ್ತೊಂದು ಸುತ್ತಿನ ಸಭೆ ನಡೆಸುವುದಾಗಿ ರೇವಣ್ಣ ಹೇಳಿದ್ದಾರೆ. ಹಾಲಿನ ದರ ಏರಿಕೆ ಸಂಬಂಧ ಸರಕಾರ ನ್ಯಾಯಾಲಯದಲ್ಲಿ ಕೇವಿಯಟ್ ಸಲ್ಲಿಸಿದೆ.
ಹಾಲಿನ ದರ ಏರಿಸಬಾರದು ಎಂಬ ಸರ್ಕಾರದ ಮನವಿ ಕಡೆಗಣಿಸಿ, ಕೆಎಂಎಫ್ ಆಡಳಿತ ಮಂಡಳಿ ಲೀಟರ್ ಹಾಲಿಗೆ 2 ರೂ. ಏರಿಸುವ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಅಂತಿಮವಾಗಿ ಸಲ್ಲಿಸಿದ ಮನವಿಯನ್ನು ಸರ್ಕಾರ ತಳ್ಳಿ ಹಾಕಿರುವುದರಿಂದ ಸಮಸ್ಯೆ ಮತ್ತಷ್ಟು ಜಟಿಲಗೊಂಡಿದೆ.
ರೈತರು ಉತ್ಪಾದಿಸಿದ ಉತ್ಪನ್ನಗಳಲ್ಲಿ ಹಾಲಿಗೆ ಮಾತ್ರ ಉತ್ತಮ ಬೆಲೆ ಸಿಗುತ್ತಿರುವುದರಿಂದ ರಾಜ್ಯದಲ್ಲಿ 20ಲಕ್ಷಕ್ಕೂ ಹೆಚ್ಚು ರೈತರು ಹೈನುಗಾರಿಕೆಯನ್ನು ನಂಬಿಕೊಂಡಿದ್ದಾರೆ.
|