ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸಾಂಗ್ಲಿಯಾನ ಬಂಧನಕ್ಕೆ ಬಿಜೆಪಿ ಶಾಸಕರ ಆಗ್ರಹ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಾಂಗ್ಲಿಯಾನ ಬಂಧನಕ್ಕೆ ಬಿಜೆಪಿ ಶಾಸಕರ ಆಗ್ರಹ
ರಾಜ್ಯಾದ್ಯಂತ ಪ್ರಾರ್ಥನಾ ಮಂದಿರಗಳ ಮೇಲೆ ನಡೆಯುತ್ತಿರುವ ದಾಳಿಗೆ ನ್ಯೂಲೈಫ್ ಸಂಸ್ಥೆಯ ಪೋಷಕರಾದ ಸಂಸದ ಎಚ್.ಟಿ.ಸಾಂಗ್ಲಿಯಾನ ಅವರೇ ನೇರ ಹೊಣೆಯಾಗಿದ್ದು,ಅವರನ್ನು ಕೂಡಲೇ ಬಂಧಿಸಬೇಕೆಂದು ಬಿಜೆಪಿ ಶಾಸಕರು ಒತ್ತಾಯಿಸಿದ್ದಾರೆ.

ವಿಧಾನಸೌಧದಲ್ಲಿ ಇರುವ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸೋಮವಾರ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶಾಸಕರಾದ ಮುನಿರಾಜು,ನಂದೀಶ್ ರೆಡ್ಡಿ ಹಾಗೂ ಎಸ್.ಆರ್.ವಿಶ್ವನಾಥ್ ಅವರು,ಉದ್ರೇಕಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಸಾಂಗ್ಲಿಯಾನ ಜನರ ದಿಕ್ಕನ್ನು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.

ಚರ್ಚ್ ದಾಳಿ ಪ್ರಕರಣದಲ್ಲಿ ಬಿಜೆಪಿ ಹಾಗೂ ಸಂಘಪರಿವಾರ ಭಾಗಿಯಾಗಿದೆ ಎಂಬ ಪ್ರತಿಪಕ್ಷಗಳ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಇದಕ್ಕೆ ಸರ್ಕಾರದ ಕುಮ್ಮಕ್ಕಿದೆ ಎಂಬುದು ಕೂಡಾ ನಿರಾಧಾರ ಎಂದು ಹೇಳಿದರು.

ನ್ಯೂಲೈಫ್ ಸಂಸ್ಥೆಯ ಅಧ್ಯಕ್ಷ ವಿ.ಎಂ.ಸ್ಯಾಮ್ಯುಯಲ್ ಅವರು ಈ ಘಟನೆಗೆ ಪರೋಕ್ಷವಾಗಿ ಕಾರಣವಾಗಿದ್ದಾರೆ. ಎಲ್ಲಾ ವರ್ಗದ ಜನರ ಏಳಿಗೆಗಾಗಿ ಶ್ರಮಿಸಬೇಕಾಗಿದ್ದ ಸಾಂಗ್ಲಿಯಾನ ಅವರು ಒಂದು ಧರ್ಮದ ಪ್ರಚಾರಕರಂತೆ ವರ್ತಿಸುತ್ತಿರುವುದು ಖಂಡನೀಯ ಎಂದು ಹೇಳಿದರು.
ಮತ್ತಷ್ಟು
ಕಿಡಿಗೇಡಿಗಳ ವಿರುದ್ಧ ಗೂಂಡಾ ಕಾಯ್ದೆ: ಸಿಎಂ
ಮುಂದುವರಿದ ಲಾರಿ ಮುಷ್ಕರ
ಹಾಲು ದರ: ಕೆಎಂಎಫ್ ಪ್ರಸ್ತಾವನೆ ತಿರಸ್ಕೃತ
ಶಾಸಕರಿಗೆ 'ಜೀವನ ಮೌಲ್ಯ' ಶಿಬಿರ
ಬಳ್ಳಾರಿ:ರಂಜಾನ್ ನೂಕುನುಗ್ಗಲಿಗೆ ಇಬ್ಬರು ಬಲಿ
ದಾಳಿಗೆ ಪೊಲೀಸ್ ವೈಫಲ್ಯ ಕಾರಣ: ಸಿಎಂ