ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮಸೀದಿ-ಮಂದಿರ-ಚರ್ಚ್‌ಗೆ ಬಿಗಿ ಭದ್ರತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಸೀದಿ-ಮಂದಿರ-ಚರ್ಚ್‌ಗೆ ಬಿಗಿ ಭದ್ರತೆ
ರಾಜ್ಯದಲ್ಲಿ ಚರ್ಚ್, ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ನಡೆಯದಂತೆ ಎಲ್ಲಾ ಚರ್ಚ್, ಮಸೀದಿ, ದೇವಸ್ಥಾನಗಳಿಗೆ ಪೊಲೀಸ್ ಭದ್ರತೆ ನೀಡಲಾಗಿದ್ದು, ಇದರಿಂದಾಗಿ ರಾಜ್ಯ ಪೊಲೀಸರ ಅಭಾವವನ್ನು ಅನುಭವಿಸಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಮ್ಮ ಅಳಲನ್ನು ತೋಡಿಕೊಳ್ಳತೊಡಗಿದ್ದಾರೆ.

ಕರ್ನಾಟಕದಲ್ಲಿ ಗುಡಿ, ಚರ್ಚ್, ಮಸೀದಿಗಳ ಸಂಖ್ಯೆ ಲಕ್ಷ ದಾಟುತ್ತದೆ. ಇಷ್ಟಕ್ಕೂ ಸರ್ಕಾರ ಪೊಲೀಸರನ್ನು ಪಹರೆಗೆ ನಿಯೋಜಿಸಿದಲ್ಲಿ ದೈನಂದಿನ ಪಹರೆಗೆ ಬೇರೆ ರಾಜ್ಯದ ಪೊಲೀಸರ ಮೊರೆ ಹೋಗಬೇಕಾದೀತು ಎಂಬುದು ಸದ್ಯದ ಲೆಕ್ಕಾಚಾರ.

ರಾಜ್ಯದ ಹಿಂದೂ ಧಾರ್ಮಿಕ ತಾಣವಾದ ಕೊಲ್ಲೂರು, ಧರ್ಮಸ್ಥಳ, ಸುಬ್ರಹ್ಮಣ್ಯ, ಕಟೀಲು, ಮಂಗಳೂರಿನ ಐತಿಹಾಸಿಕ ಸಂತ ಫಿಲೋಮಿನಾ ಚರ್ಚ್, ವಿವಿಧ ದರ್ಗಾಗಳಿಗೆ ಕಳೆದ ಒಂದು ವಾರಗಳಿಂದ ಪೊಲೀಸರ ಸರ್ಪಗಾವಲು ನೀಡಲಾಗಿತ್ತು.

ರಾಜ್ಯದ ವಿವಿಧೆಡೆ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಚರ್ಚ್ ದಾಳಿಯ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆ ಈ ನಿರ್ಧಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಪೊಲೀಸರಿಗೆ ಇನ್ನು ಹೆಚ್ಚಿನ ಹೊರೆ ಬೀಳುವಂತಾಗಿದೆ.

ಒಂದೆಡೆ ದೇಶದ ವಿವಿಧೆಡೆ ಉಗ್ರಗಾಮಿಗಳ ಬಾಂಬ್ ಹಾವಳಿ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಪ್ರದೇಶಗಳಿಗೆ ವಿಶೇಷ ರಕ್ಷಣೆಗೆ ಸರ್ಕಾರ ನಿರ್ಧರಿಸಿತ್ತು. ಆದರೆ ಇದೀಗ ಕೆಲ ಮತೀಯ ಶಕ್ತಿಗಳು ಕೋಮುಭಾವನೆಗೆ ಪ್ರಚೋದನೆ ನೀಡುವ ಮೂಲಕ ಎಲ್ಲೆಡೆ ಅಶಾಂತಿಗೆ ಕಾರಣವಾಗಿದ್ದಾರೆ.
ಮತ್ತಷ್ಟು
ಸಾಂಗ್ಲಿಯಾನ ಬಂಧನಕ್ಕೆ ಬಿಜೆಪಿ ಶಾಸಕರ ಆಗ್ರಹ
ಕಿಡಿಗೇಡಿಗಳ ವಿರುದ್ಧ ಗೂಂಡಾ ಕಾಯ್ದೆ: ಸಿಎಂ
ಮುಂದುವರಿದ ಲಾರಿ ಮುಷ್ಕರ
ಹಾಲು ದರ: ಕೆಎಂಎಫ್ ಪ್ರಸ್ತಾವನೆ ತಿರಸ್ಕೃತ
ಶಾಸಕರಿಗೆ 'ಜೀವನ ಮೌಲ್ಯ' ಶಿಬಿರ
ಬಳ್ಳಾರಿ:ರಂಜಾನ್ ನೂಕುನುಗ್ಗಲಿಗೆ ಇಬ್ಬರು ಬಲಿ