ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮಂದಿರದಲ್ಲಿ ಪಾಕ್ ಪರ ಬರವಣಿಗೆ: ಹರಿಹರ ಉದ್ವಿಗ್ನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಂದಿರದಲ್ಲಿ ಪಾಕ್ ಪರ ಬರವಣಿಗೆ: ಹರಿಹರ ಉದ್ವಿಗ್ನ
ದೇವಸ್ಥಾನದ ಗೋಡೆ, ದೀಪಸ್ತಂಭದ ಮೇಲೆ ಕಿಡಿಗೇಡಿಗಳು ಹಿಂದುಗಳ ಬಗ್ಗೆ ಅವಹೇಳನಕಾರಿಯಾಗಿ ಪದಗಳನ್ನು ಬರೆದಿರುವ ವಿರುದ್ಧ ಆಕ್ರೋಶಗೊಂಡಿರುವ ನಾಗರಿಕರು ಪ್ರತಿಭಟನೆ ನಡೆಸಿದ್ದಾರೆ.

ಇದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಲ್ಲು ತೂರಾಟದಿಂದ ಕೆಲವು ವಾಹನಗಳು ಜಖಂಗೊಂಡಿವೆ.

ಜಿಲ್ಲೆಯ ಹರಿಹರ ತಾಲೂಕಿನ ಹೈಸ್ಕೂಲ್ ಬಡಾವಣೆ ಶ್ರೀ ಅಂಜನೇಯ ದೇವಸ್ಥಾನ ಮತ್ತು ದೀಪಸ್ತಂಭದ ಮೇಲೆ ಕಿಡಿಗೇಡಿಗಳು ಹಿಂದುಗಳ ಬಗ್ಗೆ ಅವಹೇಳನಕಾರಿಯಾಗಿ ಬರೆದಿದ್ದಲ್ಲದೆ, ‘ಪಾಕಿಸ್ತಾನ ಜಿಂದಾಬಾದ್’ ಎಂದು ಬರೆದು ಪಾಕಿಸ್ತಾನ ಧ್ವಜದ ಚಿಹ್ನೆ ಬಿಡಿಸಿದ್ದು ಇಷ್ಟೆಲ್ಲಾ ಅನಾಹುತಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ, ಮುಂಜಾಗರೂಕತೆ ಕ್ರಮವಾಗಿ ನಗರಸಭೆ ಸದಸ್ಯ ಸೇರಿ 20 ಜನರನ್ನು ಬಂಧಿಸಲಾಗಿದೆ. ಅಲ್ಲದೆ, ಅನಿರ್ದಿಷ್ಟಾವಧಿವರೆಗೆ ನಿಷೇಧಾಜ್ಞೆ ಹೇರಲಾಗಿದೆ.

ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದು, ಹೆಚ್ಚಿನ ಬಿಗಿ ಬಂದೋ ಬಸ್ತ್ ಏರ್ಪಡಿಸಲಾಗಿದೆ.
ಮತ್ತಷ್ಟು
ಮಹೇಂದ್ರ ಕುಮಾರ್‌ಗೆ ಜಾಮೀನು
ಮಸೀದಿ-ಮಂದಿರ-ಚರ್ಚ್‌ಗೆ ಬಿಗಿ ಭದ್ರತೆ
ಸಾಂಗ್ಲಿಯಾನ ಬಂಧನಕ್ಕೆ ಬಿಜೆಪಿ ಶಾಸಕರ ಆಗ್ರಹ
ಕಿಡಿಗೇಡಿಗಳ ವಿರುದ್ಧ ಗೂಂಡಾ ಕಾಯ್ದೆ: ಸಿಎಂ
ಮುಂದುವರಿದ ಲಾರಿ ಮುಷ್ಕರ
ಹಾಲು ದರ: ಕೆಎಂಎಫ್ ಪ್ರಸ್ತಾವನೆ ತಿರಸ್ಕೃತ