ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ದಾಳಿ ವಿಚಾರಣೆ: ಕೇಂದ್ರ ತಂಡ ಮಂಗಳೂರಿಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದಾಳಿ ವಿಚಾರಣೆ: ಕೇಂದ್ರ ತಂಡ ಮಂಗಳೂರಿಗೆ
ರಾಜ್ಯಾದ್ಯಂತ ಪ್ರಾರ್ಥನಾ ಮಂದಿರ ಮತ್ತು ಚರ್ಚ್‌ಗಳ ಮೇಲೆ ನಡೆದ ದಾಳಿಯ ನಂತರ,ರಾಜ್ಯ ಸರ್ಕಾರ ಕೈಗೊಂಡ ಭದ್ರತಾ ವ್ಯವಸ್ಥೆಗಳ ಪರಿಶೀಲನೆಗಾಗಿ ಮಂಗಳವಾರ ಕೇಂದ್ರದ ಅಧಿಕಾರಿಗಳ ತಂಡ ಮಂಗಳೂರಿಗೆ ಆಗಮಿಸಿದೆ.

ಕರ್ನಾಟಕಕ್ಕೆ ತೆರಳಿ, ಗಲಭೆ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ಒಂದು ದಿನದಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಸುವಂತೆ ಗೃಹ ಸಚಿವ ಶಿವರಾಜ್ ಪಾಟೀಲ್ ತಮ್ಮ ಸಚಿವಾಲಯದ ವಿಶೇಷ ಕಾರ್ಯದರ್ಶಿ ಎಂ.ಎಲ್.ಕುಮಾವತ್ ಮತ್ತು ಜಂಟಿ ಕಾರ್ಯದರ್ಶಿ ಎ.ಕೆ.ಯಾದವ್ ಅವರ ತಂಡಕ್ಕೆ ಸೂಚನೆ ನೀಡಿದ್ದರು.

ಆ ನಿಟ್ಟಿನಲ್ಲಿ ಇಂದು ಕುಮಾವತ್ ನೇತೃತ್ವದಲ್ಲಿ ಕೇಂದ್ರ ತಂಡ ಮಂಗಳೂರಿಗೆ ಆಗಮಿಸಿದ್ದು, ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪೊಲೀಸ್ ಅಧಿಕಾರಿಗಳಿಂದ ದಾಳಿ ಕುರಿತು ಮಾಹಿತಿ ಪಡೆಯುತ್ತಿದೆ.

ಪರಿಶೀಲನೆಯ ಬಳಿಕ ರಾಜ್ಯ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಮತ್ತು ಇತರ ಹಿರಿಯ ಅಧಿಕಾರಿಗಳ ಜೊತೆ ಗಲಭೆ ಪರಿಸ್ಥಿತಿ ಕುರಿತು ಸಮಾಲೋಚನೆ ನಡೆಸಲಿದ್ದಾರೆ ಎಂದು ಕೇಂದ್ರ ತನಿಖಾ ತಂಡದ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು
ರಾಷ್ಟ್ರಪತಿ ಆಳ್ವಿಕೆ: ಸಿದ್ದರಾಮಯ್ಯ ಆಗ್ರಹ
ಸ್ಫೋಟ: ಮಣಿಪಾಲ ಲಾಡ್ಜ್‌ನಲ್ಲಿ ತಂಗಿದ್ದ ಉಗ್ರಗಾಮಿ!
ಮಂದಿರದಲ್ಲಿ ಪಾಕ್ ಪರ ಬರವಣಿಗೆ: ಹರಿಹರ ಉದ್ವಿಗ್ನ
ಮಹೇಂದ್ರ ಕುಮಾರ್‌ಗೆ ಜಾಮೀನು
ಮಸೀದಿ-ಮಂದಿರ-ಚರ್ಚ್‌ಗೆ ಬಿಗಿ ಭದ್ರತೆ
ಸಾಂಗ್ಲಿಯಾನ ಬಂಧನಕ್ಕೆ ಬಿಜೆಪಿ ಶಾಸಕರ ಆಗ್ರಹ