ಇತ್ತೀಚೆಗೆ ಹೊಸನಗರದಲ್ಲಿ ನಡೆದ ಮಹಾಸಂಕಲ್ಪ ಸಭೆಯಲ್ಲಿ ಗುಲ್ಬರ್ಗಾ ಅಂದೋಲ ಮಠದ ಸಿದ್ದಲಿಂಗಾ ಸ್ವಾಮೀಜಿ ಕೋಮುಪ್ರಚೋದಕ ಹೇಳಿಕೆ ನೀಡಿರುವುದು ಇದೀಗ ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಮಹಾಸಂಕಲ್ಪ ಸಭೆಯಲ್ಲಿ ಸಿದ್ದಲಿಂಗಾ ಸ್ವಾಮೀಜಿ ಅವರು, ಈ ದೇಶದಲ್ಲಿ ಅಶಾಂತಿ ಹುಟ್ಟು ಹಾಕುತ್ತಿರುವ ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯವನ್ನು ನಾಶಪಡಿಸಲು ಹಿಂದೂಗಳ ಒಗ್ಗಟ್ಟಾಗಬೇಕು ಎಂದು ಬಹಿರಂಗವಾಗಿ ಕರೆ ಕೊಟ್ಟಿದ್ದರು.
ಈ ಪ್ರಚೊದನಕಾರಿ ಹೇಳಿಕೆಯನ್ನು ಖಂಡಿಸಿರುವ ಲೂಯಿಸ್ ಎಂಬುವವರು ಗೋಕರ್ಣದ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ಪೊಲೀಸ್ ಇಲಾಖೆ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳು ಸೇರಿದಂತೆ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಹಾಲಪ್ಪ, ಶಾಸಕರು ಹಾಜರಿದ್ದರು ಕೂಡ ಯಾರೊಬ್ಬರು ಸ್ವಾಮೀಜಿಯ ಹೇಳಿಕೆಯನ್ನು ಖಂಡಿಸಿ ಮಾತನಾಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
|