ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ರಾಷ್ಟ್ರಪತಿ ಆಡಳಿತದ ಭಯ ರಾಜ್ಯಕ್ಕಿಲ್ಲ:ಆಚಾರ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಷ್ಟ್ರಪತಿ ಆಡಳಿತದ ಭಯ ರಾಜ್ಯಕ್ಕಿಲ್ಲ:ಆಚಾರ್ಯ
ರಾಜ್ಯದ ವಿವಿಧೆಡೆ ಪ್ರಾರ್ಥನಾ ಮಂದಿರ ಮತ್ತು ಚರ್ಚ್‌ಗಳ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಗತ್ಯಕ್ಕಿಂತ ಹೆಚ್ಚಾಗಿ ಮಧ್ಯಪ್ರವೇಶಿಸುತ್ತಿದೆ ಎಂದು ಗೃಹ ಸಚಿವ ವಿ.ಎಸ್.ಆಚಾರ್ಯ ಕಿಡಿಕಾರಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಲಭೆ ವಿಚಾರದಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮಕೈಗೊಂಡಿದ್ದರೂ ಕೂಡ ಕೇಂದ್ರ ಸರ್ಕಾರ ಇಂದು ನಿಯೋಗವೊಂದನ್ನು ಕಳುಹಿಸಿದೆ.

ಕೇಂದ್ರ ಸರ್ಕಾರ ಸಂವಿಧಾನದ ಪರಿಚ್ಛೇಧ 355,356ನ್ನು ಹೇರುತ್ತದೆ ಎಂಬ ಭಯವಿಲ್ಲ, ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುತ್ತದೆ ಎಂಬ ಭಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾನೂನು ಮತ್ತು ಸಂಸದೀಯ ಇಲಾಖೆ, ಮಾನವ ಹಕ್ಕುಗಳ ಆಯೋಗದ ಜಂಟಿ ನಿರ್ದೇಶಕರ ಮಟ್ಟದ ಮೂವರು ಅಧಿಕಾರಿಗಳ ತಂಡ ಮಂಗಳವಾರ ಮಂಗಳೂರಿಗೆ ಭೇಟಿ ನೀಡಿದೆ.

ಮಂಗಳೂರು, ಉಡುಪಿ ಜಿಲ್ಲೆಗಳಿಗೆ ಭೇಟಿ ನೀಡಿರುವ ಕೇಂದ್ರದ ತಂಡ,ಇಂದು ಸಂಜೆ ರಾಜಧಾನಿಗೆ ಹಿಂತಿರುಗುವ ನಿರೀಕ್ಷೆಯಿದ್ದು, ಅಧಿಕಾರಿಗಳು ಮತ್ತು ನಾವು ತಂಡದೊಂದಿಗೆ ಸಭೆ ಸೇರಿ ಚರ್ಚಿಸಲಾಗುವುದು ಎಂದು ಆಚಾರ್ಯ ಹೇಳಿದರು.
ಮತ್ತಷ್ಟು
ಮುಸ್ಲಿಂ-ಕ್ರೈಸ್ತರ ನಾಶ: ವಿವಾದ ಸೃಷ್ಟಿಸಿದ ಸ್ವಾಮಿ
ದಾಳಿ ವಿಚಾರಣೆ: ಕೇಂದ್ರ ತಂಡ ಮಂಗಳೂರಿಗೆ
ರಾಷ್ಟ್ರಪತಿ ಆಳ್ವಿಕೆ: ಸಿದ್ದರಾಮಯ್ಯ ಆಗ್ರಹ
ಸ್ಫೋಟ: ಮಣಿಪಾಲ ಲಾಡ್ಜ್‌ನಲ್ಲಿ ತಂಗಿದ್ದ ಉಗ್ರಗಾಮಿ!
ಮಂದಿರದಲ್ಲಿ ಪಾಕ್ ಪರ ಬರವಣಿಗೆ: ಹರಿಹರ ಉದ್ವಿಗ್ನ
ಮಹೇಂದ್ರ ಕುಮಾರ್‌ಗೆ ಜಾಮೀನು