ದೆಹಲಿ ಸರಣಿ ಸ್ಫೋಟದ ಕುರಿತು ಮಾಹಿತಿ ಕಲೆ ಹಾಕುತ್ತಿರುವ ದೆಹಲಿ ಪೊಲೀಸರು, ಶಂಕಿತ ಉಗ್ರ ನಿಸಾರ್ ನಿಂದ ಸಾಕಷ್ಟು ಮಾಹಿತಿ ಸಂಗ್ರಹಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ನಿಸಾರ್ ತಂಗಿದ್ದ ಮಣಿಪಾಲದ ಲಾಡ್ಜ್‌ನಲ್ಲಿ ಆತನ ಜೊತೆಗೆ ಮತ್ತೊಬ್ಬ ವ್ಯಕ್ತಿಯೂ ಇದ್ದಿರುವ ಬಗ್ಗೆ ಲಾಡ್ಜ್ ಮಾಲೀಕರು ಇಲಾಖೆಗೆ ಮಾಹಿತಿಯನ್ನು ನೀಡಿದ್ದಾರೆನ್ನಲಾಗಿದೆ. ಪೊಲೀಸರು ಈಗ ಆತನ ಹುಡುಕಾಟದಲ್ಲಿದ್ದಾರೆ.
ಆದರೆ ನಿಸಾರ್‌ನೊಂದಿಗೆ ಬಂದಿದ್ದ ವ್ಯಕ್ತಿಯೇ ಇಂಡಿಯನ್ ಮುಜಾಹಿದ್ದೀನ್‌ನ 2ನೇ ಮುಖ್ಯ ನಾಯಕ ಮೊಹಮ್ಮದ್ ಸೈಫ್ ಆಗಿರಬಹುದೇ ಎಂಬ ಶಂಕೆಯನ್ನು ಇದೀಗ ಪೊಲೀಸರು ವ್ಯಕ್ತಪಡಿಸಿದ್ದಾರೆ.
ಈ ನಡುವೆ, ಆಗಸ್ಟ್ 29ರ ಬೆಳಗಿನ ಜಾವ ಬಂದ ನಿಸಾರ್ ಅಂದೇ ರಾತ್ರಿ ದೆಹಲಿಗೆ ಮರು ಪ್ರಯಾಣಿಸಿದ್ದಾನೆ. ಅಲ್ಲದೆ, ಈ ಸಂದರ್ಭದಲ್ಲಿ ದೆಹಲಿಗೆ ಎಸ್‌ಡಿಟಿ ಕರೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ನಗರದಿಂದ ದೆಹಲಿಗೆ ರೈಲಿನಲ್ಲಿ ಸ್ಫೋಟಕ ವಸ್ತುಗಳನ್ನು ಸಾಗಿಸಲಾಗಿದೆಯೇ ಎಂಬ ಪ್ರಶ್ನೆ ಪೊಲೀಸರು ಕಾಡುತ್ತಿದ್ದು, ತೀವ್ರ ತನಿಖೆ ನಡೆಸುತ್ತಿದ್ದಾರೆ.
|