ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಗೃಹ ಸಚಿವರ ಜೊತೆ ಕೇಂದ್ರ ತಂಡ ಚರ್ಚೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೃಹ ಸಚಿವರ ಜೊತೆ ಕೇಂದ್ರ ತಂಡ ಚರ್ಚೆ
ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಯಾವುದೇ ರೀತಿಯ ಗಲಭೆಗಳು ನಡೆದಿಲ್ಲ. ಈ ಬಗ್ಗೆ ತನಿಖಾ ತಂಡ ತೃಪ್ತಿ ವ್ಯಕ್ತಪಡಿಸಿದೆ ಎಂದು ಗೃಹ ಸಚಿವ ಡಾ. ವಿ.ಎಸ್. ಆಚಾರ್ಯ ತಿಳಿಸಿದ್ದಾರೆ.

ನಗರಕ್ಕೆ ಭೇಟಿ ನೀಡಿದ್ದ ಕೇಂದ್ರ ತನಿಖಾ ತಂಡದೊಂದಿಗೆ ಬುಧವಾರ ಮಾತುಕತೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ತನಿಖಾ ತಂಡಕ್ಕೆ ರಾಜ್ಯದ ಗಲಭೆ ಕುರಿತು ಸಮಗ್ರ ವರದಿ ಸಿದ್ಧಪಡಿಸಲಾಗಿದ್ದು, ಶೀಘ್ರವೇ ಕೇಂದ್ರಕ್ಕೆ ಕಳುಹಿಸಿಕೊಡಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ರಾಜ್ಯದಲ್ಲಿನ ಘಟನಾವಳಿಗಳ ಕುರಿತು ತನಿಖಾ ತಂಡ ಸಮಗ್ರ ವರದಿ ಪಡೆದುಕೊಂಡಿದೆ. ಅಲ್ಲದೆ, ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಅವರು ವಿವರಣೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯದಲ್ಲಿ ಕಂಡು ಬಂದಿರುವ ನಕ್ಸಲ್ ಹಾಗೂ ಭಯೋತ್ಪಾದಕ ಚಟುವಟಿಕೆಗಳಿಗೆ ಸಹಕಾರ ನೀಡುವುದಾಗಿ ಕೇಂದ್ರ ತಂಡ ಭರವಸೆ ನೀಡಿದೆ ಎಂದು ಅವರು ತಿಳಿಸಿದರು.
ಮತ್ತಷ್ಟು
ಮಣಿಪಾಲ ಲಾಡ್ಜ್‌‌ನಲ್ಲಿ ತಂಗಿದ್ದು ಇಬ್ಬರು ಉಗ್ರರು?
ಮತಾಂತರ ವಿರೋಧಿ ಕಾಯ್ದೆಗೆ ಪೇಜಾವರಶ್ರೀ ಆಗ್ರಹ
ಚರ್ಚ್‌ ದಾಳಿಗೆ ಸರ್ಕಾರದ ವೈಫಲ್ಯ ಕಾರಣ:ಕೇಂದ್ರ ತಂಡ
ಸಂಧಾನ ಯಶಸ್ವಿ:ಲಾರಿ ಮುಷ್ಕರ ಅಂತ್ಯ
ಚರ್ಚ್‌ ದಾಳಿಯ ಹಿಂದೆ 'ಕೈ'ವಾಡವಿಲ್ಲ: ಧರಂ
ಸೆ.30ರಿಂದ ಎಲ್ಲಾ ವಾಹನ ಮುಷ್ಕರ: ಚೆನ್ನಾರೆಡ್ದಿ