ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಎಲ್ಲಾ ತಾಲೂಕಿಗೂ ಆರೋಗ್ಯ ಕವಚ ಯೋಜನೆ:ಸಿಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಲ್ಲಾ ತಾಲೂಕಿಗೂ ಆರೋಗ್ಯ ಕವಚ ಯೋಜನೆ:ಸಿಎಂ
ಎಲ್ಲಾ ತಾಲೂಕುಗಳಲ್ಲಿಯೂ ಆರೋಗ್ಯ ಕವಚ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ನಗರದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಾಲೂಕುಗಳಿಗೆ ಆರೋಗ್ಯ ಕವಚ ಯೊಜನೆ ಜಾರಿಗೊಳಿಸುವ ನಿಟ್ಟಿನಲ್ಲಿ 10 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಈ ನಿಟ್ಟಿನಲ್ಲಿ ಹೈದರಬಾದ್ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಅಲ್ಲದೆ, ಅಂಗವಿಕಲರಿಗೆ ಪ್ರತಿ ತಿಂಗಳು 1000 ರೂ. ನೀಡುವ ಯೋಜನೆಗೆ ಸರ್ಕಾರ ಚಾಲನೆ ನೀಡಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಪೊಲಿಯೋ ಕುರಿತು ಮಾತನಾಡಿದ ಅವರು, ಪೊಲಿಯೋ ನಿರ್ಮೂಲನೆಗೆ ಸರ್ಕಾರ ಬದ್ಧವಾಗಿದ್ದು, ತಮ್ಮ ಮಕ್ಕಳಿಗೆ ಪೊಲಿಯೋ ಹನಿಯನ್ನು ತಪ್ಪದೆ ಹಾಕಿಸುವ ಮೂಲಕ ಈ ಯೋಜನೆಯನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಮತ್ತಷ್ಟು
ಗೃಹ ಸಚಿವರ ಜೊತೆ ಕೇಂದ್ರ ತಂಡ ಚರ್ಚೆ
ಮಣಿಪಾಲ ಲಾಡ್ಜ್‌‌ನಲ್ಲಿ ತಂಗಿದ್ದು ಇಬ್ಬರು ಉಗ್ರರು?
ಮತಾಂತರ ವಿರೋಧಿ ಕಾಯ್ದೆಗೆ ಪೇಜಾವರಶ್ರೀ ಆಗ್ರಹ
ಚರ್ಚ್‌ ದಾಳಿಗೆ ಸರ್ಕಾರದ ವೈಫಲ್ಯ ಕಾರಣ:ಕೇಂದ್ರ ತಂಡ
ಸಂಧಾನ ಯಶಸ್ವಿ:ಲಾರಿ ಮುಷ್ಕರ ಅಂತ್ಯ
ಚರ್ಚ್‌ ದಾಳಿಯ ಹಿಂದೆ 'ಕೈ'ವಾಡವಿಲ್ಲ: ಧರಂ