ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬಾಂಬ್ 'ನಿಷ್ಪ್ರಯೋಜಕ' ವ್ಯವಸ್ಥೆ !
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಾಂಬ್ 'ನಿಷ್ಪ್ರಯೋಜಕ' ವ್ಯವಸ್ಥೆ !
ಧಾರವಾಡದ ಸಿಂಗನಹಳ್ಳಿ ಸೇತುವೆ ಬಳಿ ಐದು ಸಜೀವ ಬಾಂಬ್ ಪತ್ತೆಯಾಗಿರುವುದಾಗಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗಿದ್ದರೆ, ಮತ್ತೊಂದೆಡೆ ಬಾಂಬ್ ನಿಷ್ಕ್ರಿಯ ದಳ ಬೆಂಗಳೂರಿನಿಂದ ಬರುವವರೆಗೆ ಕಾಯಬೇಕು ಎಂಬುದು ಅಧಿಕಾರಿಗಳ ಗೊಣಗಾಟವಾಗಿತ್ತು !

ನಮ್ಮ ಇಲಾಖೆಯ ದೌರ್ಬಲ್ಯ,ನಿಷ್ಕ್ರಿಯತೆಗೆ ಇದಕ್ಕಿಂತ ದೊಡ್ಡ ಉದಾಹರಣೆ ಇನ್ನೇನು ಬೇಕು. ಬೆಳಿಗ್ಗೆ 10.30ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 4ರ ಸಿಂಗನಹಳ್ಳಿ ಸೇತುವೆ ಬಳಿ ಬಾಂಬ್ ಇರುವುದಾಗಿ ಸ್ಥಳೀಯರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ತಕ್ಷಣವೇ ಹಿರಿಯ ಪೊಲೀಸ್ ಅಧಿಕಾರಿಗಳು, ಬಾಂಬ್ ತಪಾಸಣಾ ತಂಡ ಆಗಮಿಸಿತ್ತಾದರೂ, ಬಾಂಬ್ ನಿಷ್ಕ್ರಿಯ ದಳ ಮಾತ್ರ ರಾತ್ರಿ 7ರವರೆಗೂ ನಾಪತ್ತೆ !

ಅದಲ್ಲದೇ ಸರಣಿ ಬಾಂಬ್ ಸ್ಫೋಟ ನಡೆಸುವ ಉದ್ದೇಶದಿಂದ ಅಲ್ಲಿ ಅಮೋನಿಯಂನ ಬಳಸಿ ಸ್ಫೋಟಕವನ್ನು ಇಡಲಾಗಿತ್ತು,ಆಕಸ್ಮಿಕವಾಗಿ ಬಾಂಬ್ ಸ್ಫೋಟಗೊಂಡರೆ ಅಲ್ಲಿ ಸಾವು-ನೋವು ಸಂಭವಿಸಬೇಕೆ ವಿನಃ ಬೇರೆ ಯಾವ ಮಾರ್ಗವೂ ಇಲ್ಲ. ಯಾಕೆಂದರೆ ಬಾಂಬ್ ನಿಷ್ಕ್ರಿಯ ದಳ ಬೆಂಗಳೂರಿನಿಂದಲೇ ಆಗಮಿಸಬೇಕಾಗಿತ್ತು.

ಇಂತಹ ದೌರ್ಬಲ್ಯಗಳನ್ನು ಅರಿತುಕೊಂಡ ದುಷ್ಕರ್ಮಿಗಳು ಸಿಕ್ಕ ಅವಕಾಶಗಳನ್ನು ಎಲ್ಲೆಂದರಲ್ಲಿ ಬಳಸಿಕೊಂಡು ಅಮಾಯಕ ಜನರ ಪ್ರಾಣದೊಂದಿಗೆ ಚೆಲ್ಲಾಟವಾಡತೊಡಗಿದ್ದಾರೆ.

ಇವತ್ತಿನ ಘಟನೆಯಲ್ಲಿಯೇ ನಮ್ಮ ಪೊಲೀಸ್ ಇಲಾಖೆ ಎಷ್ಟರ ಮಟ್ಟಿಗೆ ಭಯೋತ್ಪಾದನೆಯಂತಹ ಘಟನೆಗಳನ್ನು ಎಷ್ಟು ಸಮರ್ಪಕವಾಗಿ ನಿಭಾಯಿಸಬಲ್ಲುದು, ಎಷ್ಟು ಕ್ಷಿಪ್ರವಾಗಿ ಸಮಸ್ಯೆಯನ್ನು ಬಗೆಹರಿಸಬಲ್ಲದು ಎಂಬುದರ ಸ್ಪಷ್ಟ ನಿದರ್ಶನಕ್ಕೆ ಸಾಕ್ಷಿಯಾಗಿದೆ !
ಮತ್ತಷ್ಟು
ಸಿದ್ದರಾಮಯ್ಯಗೆ ಪ್ರತಿಪಕ್ಷ ನಾಯಕ ಹುದ್ದೆ ?
ಕೋಮುವಾದದ ವಿರುದ್ಧ ಒಗ್ಗೂಡಬೇಕು: ದೇಶಪಾಂಡೆ
ನೂತನ ಜಿಲ್ಲೆಯಾಗಿ ಯಾದಗಿರಿ: ಸಿಎಂ ಘೋಷಣೆ
ಧಾರವಾಡದಲ್ಲಿ 5 ಸಜೀವ ಬಾಂಬ್ ಪತ್ತೆ
ಗುಲ್ಬರ್ಗಾದಲ್ಲಿ ಸಚಿವ ಸಂಪುಟ ಸಭೆ ಆರಂಭ
ಪಕ್ಷವನ್ನು ಬಲಪಡಿಸಿ ತೋರಿಸುವೆ:ದೇಶಪಾಂಡೆ