ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮತ್ತೆ ಪ್ರಾರ್ಥನಾ ಮಂದಿರದ ಮೇಲೆ ದಾಳಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮತ್ತೆ ಪ್ರಾರ್ಥನಾ ಮಂದಿರದ ಮೇಲೆ ದಾಳಿ
ರಾಜ್ಯದಲ್ಲಿ ಪ್ರಾರ್ಥನಾ ಮಂದಿರಗಳ ಮೇಲಿನ ದಾಳಿ ಮತ್ತೆ ಮುಂದುವರಿದಿದ್ದು, ನಗರದ ಯಲಹಂಕ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅಟ್ಟೂರು ಬಡಾವಣೆಯ 10ನೇ ಅಡ್ಡ ರಸ್ತೆಯಲ್ಲಿರುವ ಅನಧಿಕೃತ ಪ್ರಾರ್ಥನಾ ಮಂದಿರವೊಂದರ ಮೇಲೆ ಶುಕ್ರವಾರ ರಾತ್ರಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.

ತಡರಾತ್ರಿ ಪ್ರಾರ್ಥನಾ ಮಂದಿರದ ಮೇಲೆ ನುಗ್ಗಿದ ದುಷ್ಕರ್ಮಿಗಳು ಮಂದಿರದ ಬಾಗಿಲು ಒಡೆದು ಪೀಠೋಪಕರಣ ಧ್ವಂಸ ಮಾಡಿದ್ದಾರೆ.

ಅಲ್ಲದೆ, ಪ್ರಾರ್ಥನಾ ಸ್ಥಳದಲ್ಲಿದ್ದ ಕೆಲ ಪುಸ್ತಕಗಳಿಗೆ ಬೆಂಕಿ ಹಚ್ಚಿದ್ದಾರೆ. ಇದು ಅಧಿಕೃತ ಪ್ರಾರ್ಥನಾ ಮಂದಿರವಲ್ಲ. ಈ ಮಂದಿರವಿರುವ ಸ್ಥಳ ಶೆಡ್ ರೀತಿ ಇದೆ. ಇದು ಪೊಲೀಸ್ ಅಧಿಕಾರಿಯೊಬ್ಬರಿಗೆ ಸೇರಿದ್ದಾಗಿದೆ ಎಂದು ತಿಳಿದು ಬಂದಿದೆ.

ಈ ಮಧ್ಯೆ ಇದೊಂದು ಅಧಿಕೃತ ಪ್ರಾರ್ಥನಾ ಮಂದಿರ ಅಲ್ಲವಾದ್ದರಿಂದ ಈ ಬಗ್ಗೆ ಪೊಲೀಸರು ರಕ್ಷಣೆ ನೀಡಿರಲಿಲ್ಲ ಎಂದು ತಿಳಿದು ಬಂದಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಮತ್ತಷ್ಟು
ಕಾಗೇರಿಯನ್ನು ಸಂಪುಟದಿಂದ ಕೈಬಿಡಲು ಆಗ್ರಹ
ಬಾಂಬ್ 'ನಿಷ್ಪ್ರಯೋಜಕ' ವ್ಯವಸ್ಥೆ !
ಸಿದ್ದರಾಮಯ್ಯಗೆ ಪ್ರತಿಪಕ್ಷ ನಾಯಕ ಹುದ್ದೆ ?
ಕೋಮುವಾದದ ವಿರುದ್ಧ ಒಗ್ಗೂಡಬೇಕು: ದೇಶಪಾಂಡೆ
ನೂತನ ಜಿಲ್ಲೆಯಾಗಿ ಯಾದಗಿರಿ: ಸಿಎಂ ಘೋಷಣೆ
ಧಾರವಾಡದಲ್ಲಿ 5 ಸಜೀವ ಬಾಂಬ್ ಪತ್ತೆ