ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬನ್ನೇರುಘಟ್ಟ: ಎನ್‌ಕೌಂಟರ್‌‌ಗೆ ಗಂಧಚೋರ ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬನ್ನೇರುಘಟ್ಟ: ಎನ್‌ಕೌಂಟರ್‌‌ಗೆ ಗಂಧಚೋರ ಬಲಿ
ಬನ್ನೇರುಘಟ್ಟ ಅಭಯಾರಣ್ಯದಲ್ಲಿ ಶ್ರೀಗಂಧ ಕಳವು ಮಾಡಲು ಯತ್ನಿಸುತ್ತಿದ್ದವರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ಗಂಧಚೋರನೊಬ್ಬ ಬಲಿಯಾಗಿದ್ದಾನೆ. ಶುಕ್ರವಾರ ಈ ಘಟನೆ ನಡೆದಿದ್ದು, ಮತ್ತೊಬ್ಬ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುಂಡಿಗೆ ಬಲಿಯಾದವನನ್ನು ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಜವಾದಮಲೈ ನಿವಾಸಿ ವೆಳ್ಳಿಯನ್ ಅಲಿಯಾಸ್ ವೇಲನ್ (30). ಗಾಯಗೊಂಡ ಕಮಲ್ ಕೇಶನ್ (24)ನನ್ನು ನಿಮ್ಹಾನ್ಸ್‌‌ಗೆ ದಾಖಲಿಸಲಾಗಿದೆ.

ಬನ್ನೇರುಘಟ್ಟ ಪೊಲೀಸ್ ಠಾಣೆಯಿಂದ 6 ಕಿ.ಮೀ ದೂರದಲ್ಲಿ ಗಂಧದ ಮರ ಕತ್ತರಿಸುತ್ತಿದ್ದ ಸಂದರ್ಭದಲ್ಲಿ, ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗಾರ್ಡ್ ನಾಗರಾಜು, ವಾಚರ್‌ಗಳಾದ ನಂಜುಂಡೇಗೌಡ, ಮುನೇಗೌಡ, ಬಚ್ಚೇಗೌಡ ಅವರು ಮರ ಕಡಿಯುವ ಸದ್ದು ಕೇಳಿ ಅಲ್ಲಿಗೆ ಧಾವಿಸಿದ್ದರು.

5 ಮಂದಿ ಕಳ್ಳರು ಗಂಧದ ಮರದ ಕೊಂಬೆ ಕತ್ತರಿಸುತ್ತಿದ್ದರು. ಹತ್ತಿರಕ್ಕೆ ಬಂದ ಅರಣ್ಯ ಇಲಾಖೆಯ ಸಿಬ್ಬಂದಿ, ಕಳ್ಳರಿಗೆ ಶರಣಾಗುವಂತೆ ತಾಕೀತು ಮಾಡಿದರು. ಈ ಸಂದರ್ಭದಲ್ಲಿ ಗಂಧಚೋರರು ಮಚ್ಚು ಹಿಡಿದು ಸಿಬ್ಬಂದಿಗಳ ಮೇಲೆ ದಾಳಿಗೆ ಮುಂದಾದರು. ಆದರೆ ಕಳ್ಳರ ದಾಳಿಗೆ ಹೆದರಿ ಮೂವರು ವಾಚರ್‌ಗಳು ಪರಾರಿಯಾದರು.

ಆದರೆ ಗಾರ್ಡ್ ನಾಗರಾಜು ಮಾತ್ರ ಹೆದರದೆ ತನ್ನ ಬಳಿ ಇದ್ದ ಜೋಡು ನಳಿಕೆ ಬಂದೂಕಿನಿಂದ ಎರಡು ಮೂರು ಬಾರಿ ಗುಂಡು ಹಾರಿಸಿದ್ದರು. ಗುಂಡಿನ ದಾಳಿಗೆ ವೆಳ್ಳಿಯನ್ ತಲೆ, ಬಮುಖ, ಕುತ್ತಿಗೆ ಸಮೀಪ ತೀವ್ರ ಗಾಯಗಳಾಗಿ ಮೃತಪಟ್ಟಿದ್ದಾನೆ. ಮತ್ತೊಬ್ಬನ ಕಣ್ಣಿಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮತ್ತಷ್ಟು
ಮತ್ತೆ ಪ್ರಾರ್ಥನಾ ಮಂದಿರದ ಮೇಲೆ ದಾಳಿ
ಕಾಗೇರಿಯನ್ನು ಸಂಪುಟದಿಂದ ಕೈಬಿಡಲು ಆಗ್ರಹ
ಬಾಂಬ್ 'ನಿಷ್ಪ್ರಯೋಜಕ' ವ್ಯವಸ್ಥೆ !
ಸಿದ್ದರಾಮಯ್ಯಗೆ ಪ್ರತಿಪಕ್ಷ ನಾಯಕ ಹುದ್ದೆ ?
ಕೋಮುವಾದದ ವಿರುದ್ಧ ಒಗ್ಗೂಡಬೇಕು: ದೇಶಪಾಂಡೆ
ನೂತನ ಜಿಲ್ಲೆಯಾಗಿ ಯಾದಗಿರಿ: ಸಿಎಂ ಘೋಷಣೆ