ಕನ್ನಡದ ವರನಟ ಡಾ.ರಾಜ್‌ಕುಮಾರ್ ದಿವಗಂತರಾಗಿ ವರ್ಷ ಎರಡು ಕಳೆದರೂ ಅಭಿಮಾನಿಗಳಲ್ಲಿ ಅವರ ಬಗೆಗಿನ ಪ್ರೀತಿ ಬತ್ತಿಲ್ಲ ಎಂಬುದಕ್ಕೆ ಇಲ್ಲಿದೆ ಮತ್ತೊಂದು ಉದಾಹರಣೆ ಇದೆ.
ರಾಜ್ ಅಭಿಮಾನಿಯೊಬ್ಬರು ನನಗೆ ಡಾ.ರಾಜ್ ಕಣ್ಣು ಕೊಡಿ, ಇಲ್ಲದಿದ್ದರೆ ನಿಮ್ಮ ಆಸ್ಪತ್ರೆ ಮುಂದೆ ಸಂಸಾರ ಸಮೇತ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ನಾರಾಯಣ ನೇತ್ರಾಲಯಕ್ಕೆ ಪತ್ರ ಮೂಲಕ ಬೆದರಿಕೆಯೊಡ್ಡಿದ್ದಾರೆ.
ಅವರ ಪತ್ರದಿಂದ ದಿಗಿಲುಗೊಂಡ ನೇತ್ರಾಲಯದ ಡಾ.ಭುಜಂಗ ಶೆಟ್ಟಿ ಸುಬ್ರಮಣ್ಯನಗರದ ಪೊಲೀಸರಿಗೆ ದೂರು ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಹಿಂದೆ ವೇಣುಗೋಪಾಲ ಶೆಟ್ಟಿ ಎಂಬವರು ಬೊಮ್ಮಸಂದ್ರದ ಆಸ್ಪತ್ರೆಯಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಆದರೆ ಅವರಿಗೆ ಪೂರ್ಣ ದೃಷ್ಟಿ ಬರಲಿಲ್ಲ.
ಇದರಿಂದ ಬೇಸತ್ತ ಅವರು ಆಸ್ಪತ್ರೆಗೆ ಪತ್ರ ಬರೆದು ನೀವು ಡಾ.ರಾಜ್‌ಕುಮಾರ್ ಕಣ್ಣುಗಳನ್ನು ಅಳವಡಿಸುವುದಾಗಿ ಭರವಸೆ ನೀಡಿದ್ದಿರಿ. ಆದರೆ ಅವುಗಳನ್ನು ಅಳವಡಿಸಿಲ್ಲ. ಈಗ ಸಮಸ್ಯೆಯಿಂದ ಎರಡೂ ಕಣ್ಣುಗಳೂ ಸರಿಯಾಗಿ ಕಾಣುತ್ತಿಲ್ಲ. ನನಗೆ ಅಣ್ಣಾವ್ರ ಕಣ್ಣುಗಳನ್ನು ಅಳವಡಿಸದಿದ್ದರೆ ಕುಟುಂಬ ಸಮೇತರಾಗಿ ಆಸ್ಪತ್ರೆ ಮುಂದೆ ಅಥವಾ ವಿಧಾನಸೌಧ ಮುಂದೆ ಬೆಂಕಿ ಹಚ್ಚಿಕೊಳ್ಳುತ್ತೇವೆ ಎಂದು ಬೆದರಿಕೆಯೊಡ್ಡಿದ್ದಾರೆ.
|