ಹಿರಿಯ ಅಧಿಕಾರಿಗಳ ಕಿರುಕುಳ ತಾಳಲಾರದೆ ನೋಕಿಯಾ ಕಂಪೆನಿಯಲ್ಲಿ ಕೆಲಸ ಮಾಡುವ ಸಾಫ್ಟ್‌ವೇರ್ ಇಂಜಿನಿಯರ್ ಸೋನಿಯಾ (25)ಎಂಬಾಕೆ ಶುಕ್ರವಾರ ರಾತ್ರಿ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜಯನಗರದಲ್ಲಿ ವಾಸ್ತವ್ಯ ಹೂಡಿದ್ದ ಸೋನಿಯಾ ನೋಕಿಯಾ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಘಟನೆ ಕುರಿತು ತಿಲಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆತ್ಮಹತ್ಯೆಗೆ ಶರಣಾದ ಎಂ.ಜಿ.ಸೋನಿಯಾ, ಎಂ.ಆರ್.ಜಗದೀಶ್ ಅವರ ಮಗಳು. ಮಾರತ್‌ಹಳ್ಳಿಯಲ್ಲಿರುವ ನೋಕಿಯಾ ಕಂಪೆನಿಯಲ್ಲಿ ಕಳೆದ ಎರಡು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು.
ಆಕೆ ಆತ್ಮಹತ್ಯೆಗೆ ಮುನ್ನ 3 ಡೆತ್ ನೋಟ್ ಬರೆದಿಟ್ಟಿದ್ದು,ಒಂದು ಪೊಲೀಸರಿಗೆ, ಮತ್ತೊಂದು ಪತ್ರಿಕೆಗಳಿಗೆ ಇನ್ನೊಂದು ಕೆಲಸ ಮಾಡುವ ಆಡಳಿತ ವರ್ಗಕ್ಕೆ.ತಾನು ಕೆಲಸ ಮಾಡುವ ನೋಕಿಯಾ ಸಾಫ್ಟ್‌ವೇರ್ ಸಂಸ್ಥೆಯ ಮ್ಯಾನೇಜರ್‌ಗಳು ನೀಡುತ್ತಿದ್ದ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪತ್ರದಲ್ಲಿ ತಿಳಿಸಿದ್ದಳು.
|