ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬಾಂಬ್ ಪತ್ತೆಗೆ ವಿಶೇಷ ತಂಡ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಾಂಬ್ ಪತ್ತೆಗೆ ವಿಶೇಷ ತಂಡ
ಇಲ್ಲಿನ ಸಿಂಗನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಶುಕ್ರವಾರ 3 ಬಾಂಬ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಿರುವ ಪೊಲೀಸ್ ಇಲಾಖೆ, ಬಾಂಬ್ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಿರುವುದಾಗಿ ತಿಳಿಸಿದೆ.

ರಾಜ್ಯದಲ್ಲೂ ಬಾಂಬ್ ಪತ್ತೆಯಾಗುತ್ತಿರುವ ಪ್ರಕರಣ ಬೆಳಕಿಗೆ ಬಂದಿರುವ ನಿಟ್ಟಿನಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಈ ಮಧ್ಯೆ ಧಾರವಾಡದಿಂದ ಸುಮಾರು 20 ಕಿಮೀ ದೂರದಲ್ಲಿರುವ ಸಿಂಗನಹಳ್ಳಿ ಹಾಗೂ ವೆಂಕಟಾಪುರದ ಮಧ್ಯೆ ಇರುವ ಸೇತುವೆ ಕೆಳಗೆ ಪತ್ತೆಯಾಗಿರುವ ಬಾಂಬ್ ಸಿಲಿಂಡರ್ ಬಾಂಬ್ ಎಂದು ಗುರುತಿಸಲಾಗಿದೆ ಎಂದು ಉತ್ತರ ವಲಯದ ಐಜಿಪಿ ರಾಘವೇಂದ್ರ ಔರಾದಕರ್ ತಿಳಿಸಿದ್ದಾರೆ.

ನಿನ್ನೆ ಪತ್ತೆಯಾಗಿರುವುದು ಒಂದೇ ಬಾಂಬ್ ಎಂದು ಸ್ಪಷ್ಟಪಡಿಸಿದ ಅವರು, ಪೈಪ್ ಹಾಗೂ ಸಿಲಿಂಡರ್ ಸೇರಿಸಿ ಬಾಂಬ್ ಸಿದ್ಧಪಡಿಸಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದರು. ಬೆಂಗಳೂರಿನಿಂದ ತೆರಳಿದ್ದ ಬಾಂಬ್ ನಿಷ್ಕ್ರಿಯ ದಳ ಪತ್ತೆಯಾದ 3ಬಾಂಬ್ ಅನ್ನು ನಿಷ್ಕ್ರಿಯಗೊಳಿಸಿತ್ತು.

ಈ ಕುರಿತಾದ ಹೆಚ್ಚಿನ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದ್ದು, ಆರೋಪಿಗಳನ್ನು ಬಂಧಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಮತ್ತಷ್ಟು
ಗುಪ್ತಚರ ಇಲಾಖೆಯಿಂದ ಫೋನ್ ಕದ್ದಾಲಿಕೆ:ಉಗ್ರಪ್ಪ
ನೋಕಿಯಾ ಯುವತಿ ನೇಣಿಗೆ ಶರಣು
ಶಹಾಪುರ ಬಂದ್ ಯಶಸ್ವಿ
ಬಿಜೆಪಿ ನಪುಂಸಕ ಸರ್ಕಾರ: ಕುಮಾರಸ್ವಾಮಿ
ನೂತನ ಜಿಲ್ಲೆ ಘೋಷಣೆಗೆ ಖರ್ಗೆ ಸ್ವಾಗತ
ರಾಜ್ ಕಣ್ಣು ಕೊಡಿ,ಇಲ್ಲದಿದ್ದರೆ ಆತ್ಮಹತ್ಯೆ !