ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಉಲ್ಟಾ ಹೊಡೆದ ಸಾಂಗ್ಲಿಯಾನಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಲ್ಟಾ ಹೊಡೆದ ಸಾಂಗ್ಲಿಯಾನಾ
ಸಾಂಗ್ಲಿಯಾನಾ ಉಲ್ಟಾ ಹೊಡೆದಿದ್ದಾರೆ. ತಾವು ನೀಡಿದ ಹೇಳಿಕೆ ವಿವಾದ ಹುಟ್ಟುಹಾಕುತ್ತಿದ್ದಂತೆ ತಾವು ಹಾಗೆ ಹೇಳಿಯೇ ಇಲ್ಲ. ಅವೆಲ್ಲವೂ ಮಾಧ್ಯಮಗಳ ಸೃಷ್ಟಿ ಎಂದು ಗೂಬೆ ಕೂರಿಸುವುದು ರಾಜಕಾರಣಿಗಳ ಜಾಯಮಾನ. ಈಗ ಅದೇ ಹಾದಿಯನ್ನು ನಿವೃತ್ತ ಐಪಿಎಸ್ ಅಧಿಕಾರಿ ಎಚ್.ಟಿ.ಸಾಂಗ್ಲಿಯಾನಾ ಅನುಭವಿಸುತ್ತಿದ್ದಾರೆ.

ಮುಖ್ಯಮಂತ್ರಿಗಳ ವಿರುದ್ಧ ಹೇಳಿಕೆ ನೀಡಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದ ಬೆಂಗಳೂರು ಉತ್ತರ ಲೋಕಸಭಾ ಸದಸ್ಯ ಸಾಂಗ್ಲಿಯಾನಾ, ಯಡಿಯೂರಪ್ಪನವರಿಂದ ಕ್ರೈಸ್ತ ಧರ್ಮೀಯರಿಗೆ ತೊಂದರೆ ಉಂಟಾಗಿದೆ ಎಂದು ಎಲ್ಲಿಯೂ ಹೇಳಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.

ಇತ್ತೀಚೆಗೆ ಚರ್ಚ್ ಮೇಲಿನ ದಾಳಿಗಳಿಗೆ ಸಂಬಂಧಿಸಿ ದಾಖಲಾಗಿರುವ ಎಲ್ಲ ಮೊಕದ್ದಮೆಗಳನ್ನೂ ಸರ್ಕಾರ ವಾಪಸ್ ಪಡೆಯಬೇಕು. ಕ್ರಿಶ್ಚಿಯನ್ನರು ಕೂಡಾ ತಾವು ನೀಡಿರುವ ದೂರುಗಳನ್ನು ವಾಪಸ್ ಪಡೆಯಬೇಕು. ಉಭಯ ಕೋಮುಗಳ ಮಧ್ಯೆ ಸೌಹಾರ್ದ ನೆಲೆಸಲು ಇದು ಅನಿವಾರ್ಯ ಎಂದು ಹೇಳಿದರು.

ಮತಾಂತರಕ್ಕೆ ಸಂಬಂಧಿಸಿದ ಘರ್ಷಣೆಗೆ ಎರಡು ನಂಬಿಕೆಗಳ ನಡುವಿನ ತಪ್ಪು ತಿಳುವಳಿಕೆಯೇ ಕಾರಣ. ಸಮಾಜದಲ್ಲಿ ಶಾಂತಿ, ಸೌಹಾರ್ದ, ನೆಲೆಸಬೇಕು ಎಂದರು.
ಮತ್ತಷ್ಟು
ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ: ರೆಡ್ಡಿ
ಬಾಂಬ್ ಪತ್ತೆಗೆ ವಿಶೇಷ ತಂಡ
ಗುಪ್ತಚರ ಇಲಾಖೆಯಿಂದ ಫೋನ್ ಕದ್ದಾಲಿಕೆ:ಉಗ್ರಪ್ಪ
ನೋಕಿಯಾ ಯುವತಿ ನೇಣಿಗೆ ಶರಣು
ಶಹಾಪುರ ಬಂದ್ ಯಶಸ್ವಿ
ಬಿಜೆಪಿ ನಪುಂಸಕ ಸರ್ಕಾರ: ಕುಮಾರಸ್ವಾಮಿ