ಮತ್ತೊಮ್ಮೆ ಅಹಿಂದಾ ಚಳುವಳಿಗೆ ವೇದಿಕೆ ಸಿದ್ಧವಾಗುತ್ತಿದೆ. ಪ್ರತಿ ಹಂತದಲ್ಲೂ ಕಾಂಗ್ರೆಸ್ ಸಿದ್ಧರಾಮಯ್ಯನವರನ್ನು ಕಡೆಗಣಿಸಿದ್ದೇ ಮತ್ತೊಂದು ಅಹಿಂದಾ ನಡೆಸಲು ನಾಂದಿಯಾಡುತ್ತಿದೆ.
ಕಾಯುತ್ತಾ ಕೂತರೆ ಪ್ರಯೋಜನವಿಲ್ಲ. ಆಗಾಗ ಶಕಿ ಪ್ರದರ್ಶನ ಮಾಡುತ್ತಿದ್ದರೆ ಮಾತ್ರ ಪಕ್ಷದಲ್ಲಿ ನಮ್ಮ ಬಣಕ್ಕೆ ಪ್ರಾತಿನಿಧ್ಯ ಸಿಗಲಿದೆ. ಇಲ್ಲವಾದಲ್ಲಿ ಕಾಯುತ್ತಲೇ ಇರಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಅವರಿಗೆ ಅವರ ಬೆಂಬಲಿಗರು ಮನದಟ್ಟು ಮಾಡಿಕೊಟ್ಟು ಅಹಿಂದಾ ಮರುಹುಟ್ಟು ಹಾಕಲು ಅನುಮತಿ ಕೊಡುವಂತೆ ಕೇಳುತ್ತಿದ್ದಾರೆ.
ನಮಗೆ ಅಹಿಂದಾ ಚಳುವಳಿ ಮುಂದುವರಿಸಲು ಸೂಚನೆ ನೀಡಿ. ಕಾಂಗ್ರೆಸ್ ಸೇರಿದಾಗಿನಿಂದಲೂ ನಿಮ್ಮೊಡನೆ ನಾವೂ ನೋವು ಅಪಮಾನ ಸಹಿಸಿಕೊಂಡಿದ್ದೇವೆ. ಆದರೆ ಕಡೆಗಣನೆ ಮಿತಿ ಮೀರಿದೆ. ಹೈಕಮಾಂಡ್ ಹಿಂದುಳಿದ ವರ್ಗದವರ ಪರ ಇಲ್ಲ ಎಂಬುದನ್ನು ಸಾಬೀತುಪಡಿಸಿದೆ. ಎಲ್ಲ ಸಂದರ್ಭದಲ್ಲೂ ಹಿಂದುಳಿದವರನ್ನು ತುಳಿಯುತ್ತಲೇ ಬಂದಿದೆ ಎಂದು ಸಿದ್ದು ಬೆಂಬಲಿಗರು ದೂರಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಪಟ್ಟ ಸಿದ್ಧರಾಮಯ್ಯನವರಿಗೆ ಸಿಕ್ಕಿತು ಎನ್ನುವಷ್ಟರಲ್ಲಿ ಮೇಲ್ವರ್ಗದ ದೇಶಪಾಂಡೆ ಅವರನ್ನು ತಂದು ಕೂರಿಸಿದರು. ನವೆಂಬರ್‌ನಲ್ಲಿ ರಾಜ್ಯಾದ್ಯಂತ ಅಹಿಂದ ಚಳವಳಿ ನಡೆಸಲು ಅನುಮತಿ ನೀಡುವಂತೆ ಸಿದ್ಧರಾಮಯ್ಯ ಮೇಲೆ ಬೆಂಬಲಿಗರು ಒತ್ತಡ ಹೇರಿದ್ದಾರೆ.
|