ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮೈಸೂರಿನ ಬಂಧಿತರು ಉಗ್ರರಲ್ಲ:ಪೊಲೀಸ್ ಸ್ಪಷ್ಟನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೈಸೂರಿನ ಬಂಧಿತರು ಉಗ್ರರಲ್ಲ:ಪೊಲೀಸ್ ಸ್ಪಷ್ಟನೆ
ವಿಧ್ವಂಸಕ ಕೃತ್ಯ ಎಸಗಲು ಹುನ್ನಾರ ನಡೆಸಿದ್ದರು ಎಂಬ ಹಿನ್ನೆಲೆಯಲ್ಲಿ ನಗರದಲ್ಲಿ ಬಂಧಿಸಲಾಗಿರುವ ಇಬ್ಬರು ಶಂಕಿತ ಉಗ್ರರಲ್ಲ ಎಂದು ಪೊಲೀಸ್ ಆಯುಕ್ತ ಡಾ. ಪರಶಿವ ಮೂರ್ತಿ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಯೋತ್ಪಾದನೆ ಹಿನ್ನೆಲೆಯಲ್ಲಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆಯೇ ಹೊರತು ಅವರು ಶಂಕಿತ ಉಗ್ರರಲ್ಲ ಎಂದು ದೃಢಪಡಿಸಿದ್ದಾರೆ.

ಈ ಮೊದಲು ಈ ಇಬ್ಬರು ಟಾಡಾ ಕಾಯ್ದೆ ಅನ್ವಯ ಬಂಧಿತರಾಗಿ ಬಿಡುಗಡೆಗೊಂಡಿದ್ದರು. ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದರಿಂದ ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ಭಯೋತ್ಪಾದನೆಯಿಂದ ಜನತೆ ಆತಂಕಗೊಂಡಿದ್ದಾರೆ. ಆದರೆ ಮೈಸೂರಿನಲ್ಲಿ ನಡೆಯಲಿರುವ ಐತಿಹಾಸಿಕ ದಸರಾ ಉತ್ಸವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋ ಬಸ್ತ್ ಕೈಗೊಳ್ಳಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಚಿವ ಜನಾರ್ದನ ರೆಡ್ಡಿ ವಿರುದ್ಧ ಕಳ್ಳತನದ ದೂರು
ಅ.6ಕ್ಕೆ ದೇಶಪಾಂಡೆ ಅಧಿಕಾರ ಸ್ವೀಕಾರ
ವಿಶ್ವವಿಖ್ಯಾತ ದಸರಾ ಉತ್ಸವಕ್ಕೆ ಕ್ಷಣಗಣನೆ
ಮೈಸೂರಲ್ಲಿ ಇನ್ನಿಬ್ಬರ ಸೆರೆ-ದಸರಾ ವಿಧ್ವಂಸ ಸಂಚು ಬಯಲು
ಗೋಧ್ರಾ:ನ್ಯಾಯಾಧೀಶರಿಂದ ತನಿಖೆಗೆ ಗೌಡ ಆಗ್ರಹ
ವಿದೇಶೀ ವಲಸಿಗರ ಮೇಲೆ ಹದ್ದಿನ ಕಣ್ಣು: ಯಡಿಯೂರಪ್ಪ