ಚಿತ್ರನಟ ಹಾಗೂ ಕೆಎಸ್ಆರ್ ಟಿಸಿ ಉಪಾಧ್ಯಕ್ಷರಾಗಿರುವ ಜಗ್ಗೇಶ್ ಅವರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕಾರು ಚಾಲಕ ಪದ್ಮನಾಭ ದೂರು ನೀಡಿರುವ ಬಗ್ಗೆ ಜಗ್ಗೇಶ್ ಕಿಡಿಕಾರಿದ್ದಾರೆ.
‘ನನ್ನ ವರ್ಚಸ್ಸು ಹಾಳು ಮಾಡಲು ವ್ಯವಸ್ಥಿತ ಪಿತೂರಿ ನಡೆಸಿ ನನ್ನ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.
ಚಾಲಕನಾಗಿದ್ದ ಪದ್ಮನಾಭ ಕುಡಿತದ ಚಟ ಹೊಂದಿ ಅನೇಕ ಬಾರಿ ಬಾರ್‌ಗಳಲ್ಲಿ ಗಲಾಟೆ ಮಾಡಿ ಪೊಲೀಸರಿಗೂ ಸಿಕ್ಕಿ ಬಿದ್ದ ಉದಾಹರಣೆಗಳಿವೆ. ನನ್ನ ಮನೆಯ ಮಗನಾಗಿ ಆತನನ್ನು ಬೆಳೆಸಿದ್ದೇನೆ ಹೊರತು ಯಾವುದೇ ರೀತಿಯ ಕೇಡು ಬಯಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜಕೀಯದಲ್ಲಿ ಹಾಗೂ ಸಿನಿಮಾ ರಂಗದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಪ್ರಾಮಾಣಿಕವಾಗಿ ಸೇವೆ ಮಾಡಿಕೊಂಡು ಬರುತ್ತಿದ್ದೇನೆ. ಇದರಿಂದ ಅಸೂಯೆಗೊಂಡಿರುವ ಕೆಲವು ದುಷ್ಕರ್ಮಿಗಳು ತಮ್ಮ ಹೆಸರಿಗೆ ಕಪ್ಪು ಮಸಿ ಬಳಿಯಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ನನ್ನ ಬಗ್ಗೆ ದೂರು ದಾಖಲಿಸಿರುವ ಬಗ್ಗೆ ಕಾನೂನು ರೀತಿ ಕ್ರಮ ಕೈಗೊಳ್ಳಲು ವಕೀಲರನ್ನು ಸಂಪರ್ಕಿಸಿರುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. |
|