ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಗೋಳಗುಮ್ಮಟ-ಆಲಮಟ್ಟಿ ಸ್ಫೋಟಕ್ಕೆ ಸಂಚು !
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೋಳಗುಮ್ಮಟ-ಆಲಮಟ್ಟಿ ಸ್ಫೋಟಕ್ಕೆ ಸಂಚು !
ನಗರದಲ್ಲಿ ಸಂಭವಿಸಿದ್ದ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿದ್ದ ಬಿಜಾಪುರ ಮೂಲದ ವಿದ್ಯಾರ್ಥಿ ಮೊಹಮದ್ ಸಮಿ ವಿಚಾರಣೆ ವೇಳೆ ಮಹತ್ವದ ಅಂಶವನ್ನು ಬಾಯ್ಬಿಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಅಹಮದಾಬಾದ್,ದೆಹಲಿ ಸೇರಿದಂತೆ ದೇಶಾದ್ಯಂತ ಸ್ಫೋಟ ಸಂಚು ರೂಪಿಸಿದ್ದ ಉಗ್ರರು ಕರ್ನಾಟಕದ ಬಿಜಾಪುರದ ಗೋಳಗುಮ್ಮಟ ಹಾಗೂ ಆಲಮಟ್ಟಿ ಡ್ಯಾಂ ಅನ್ನು ಸ್ಫೋಟಿಸುವ ಯೋಜನೆ ಹೊಂದಲಾಗಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ನೀಡಿದ್ದಾನೆಂದು ಅಧಿಕಾರಿಗಳು ಹೇಳಿದ್ದಾರೆ.

ವಿಜಾಪುರದ ಬಳಿ ಸೆರೆ ಸಿಕ್ಕಿರುವ ಸಮಿಗೆ ಗುಜರಾತ್‌ನಲ್ಲಿ ಬಂಧಿತನಾಗಿರುವ ಇನ್ನೊಬ್ಬ ಸಿಮಿ ಸಂಘಟನೆಯ ಮೊಹಮ್ಮದ್ ಹಫೀಜ್ ಜೊತೆ ನಿಕಟ ಸಂಪರ್ಕ ಇದ್ದಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ.

ರಾಜ್ಯದ ಆಲಮಟ್ಟಿ, ಕೆಆರ್‌ಎಸ್, ತುಂಗಭದ್ರಾ, ಶರಾವತಿ, ಕಬಿನಿ, ಹಾರಂಗಿ ಜಲಾಶಯಗಳನ್ನೂ ಸ್ಫೋಟಿಸಲು ನೀಲ ನಕ್ಷೆ ರೂಪಿಸಿದ್ದರು.ಅಲ್ಲದೇ ನಾಡಿನ ಪ್ರಮುಖ ದೇಗುಲಗಳಾದ ಇಸ್ಕಾನ್, ಧರ್ಮಸ್ಥಳ, ಕೊಲ್ಲೂರು ಮೂಕಾಂಬಿಕೆ ಹಾಗೂ ಮೈಸೂರು ಅರಮನೆ, ಹಂಪಿ, ಬಾದಾಮಿ, ಐಹೊಳೆ ಸೇರಿದಂತೆ ಹಲವು ಪ್ರಮುಖ ಸ್ಥಳಗಳ ಸ್ಫೋಟಕ್ಕೆ ಸಂಚು ರೂಪಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜೆಡಿಎಸ್ ಜೊತೆ 'ಕೈ' ಜೋಡಿಕೆಗೆ ವೇದಿಕೆ ಸಿದ್ದ
ಜಗ್ಗೇಶ್ ವಿರುದ್ಧ ದೂರು ದಾಖಲು
ಮೈಸೂರಿನ ಬಂಧಿತರು ಉಗ್ರರಲ್ಲ:ಪೊಲೀಸ್ ಸ್ಪಷ್ಟನೆ
ಸಚಿವ ಜನಾರ್ದನ ರೆಡ್ಡಿ ವಿರುದ್ಧ ಕಳ್ಳತನದ ದೂರು
ಅ.6ಕ್ಕೆ ದೇಶಪಾಂಡೆ ಅಧಿಕಾರ ಸ್ವೀಕಾರ
ವಿಶ್ವವಿಖ್ಯಾತ ದಸರಾ ಉತ್ಸವಕ್ಕೆ ಕ್ಷಣಗಣನೆ