ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಅ.7ಕ್ಕೆ ರೈತರಿಂದ ಬೃಹತ್ ಪ್ರತಿಭಟನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅ.7ಕ್ಕೆ ರೈತರಿಂದ ಬೃಹತ್ ಪ್ರತಿಭಟನೆ
ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು ಅ.7ರಂದು ಮೈಸೂರು- ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ನಿರ್ಧರಿಸಿದ್ದು,ಇದರಿಂದಾಗಿ ದಸರಾ ಉತ್ಸವದ ಕೊನೆ ದಿನಗಳಲ್ಲಿ ಸಾಂಸ್ಕೃತಿಕ ರಾಜಧಾನಿಗೆ ಆಗಮಿಸುವ ಪ್ರವಾಸಿಗರು ತೊಂದರೆ ಎದುರಿಸುವಂತಾಗಲಿದೆ.

ಮಂಡ್ಯದಿಂದ ಆರಂಭವಾಗಿ ಮೈಸೂರಿನವರೆಗೆ ವಿವಿಧ ಕೇಂದ್ರಗಳಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ರೈತರು ರಸ್ತೆ ತಡೆ ನಡೆಲಿದ್ದಾರೆ. ಕಬ್ಬು ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಸೇರಿದಂತೆ ನಮ್ಮ ವಿವಿಧ ಬೇಡಿಕೆಗಳಿಗೆ ಸರ್ಕಾರ ಸಕಾರಾತ್ಮಕವಾಗಿ ಪ್ರತಿಕ್ರಿಯಿಸದೇ ಇದ್ದ ಕಾರಣ ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಕೆಆರ್ಆರ್ಎಸ್‌‌ನ ಮುಖ್ಯಸ್ಥ ಕೆ.ಎಸ್.ಪುಟ್ಟಣ್ಣಯ್ಯ ತಿಳಿಸಿದ್ದಾರೆ.

ರೈತರ ಸಮಸ್ಯೆಯನ್ನು ವಿರೋಧ ಪಕ್ಷಗಳೂ ಕೂಡಾ ಗಂಭೀರವಾಗಿ ಪರಿಗಣಿಸಿಲ್ಲ. ರೈತರ ಸಮಸ್ಯೆಗಳಿಗೆ ಗಮನ ಕೊಡಲು ಅವರಿಗೆ ಪುರುಸೊತ್ತು ಇಲ್ಲ ಎಂದು ಅವರು ಟೀಕಿಸಿದರು. ಆದರೆ ಪ್ರತಿಭಟನೆ ನಡೆಸಿ ಪ್ರವಾಸಿಗರಿಗೆ ತೊಂದರೆ ಮಾಡದಂತೆ ತಾವು ರೈತರ ಮನವೊಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದಸರಾಕ್ಕೆ ಸಿದ್ದಗಂಗಾಶ್ರೀ ಚಾಲನೆ
ಅನಗತ್ಯ ಕ್ಯಾಬಿನೆಟ್ ದರ್ಜೆ ಸೃಷ್ಟಿ: ಕುಮಾರಸ್ವಾಮಿ
ಗೋಳಗುಮ್ಮಟ-ಆಲಮಟ್ಟಿ ಸ್ಫೋಟಕ್ಕೆ ಸಂಚು !
ಜೆಡಿಎಸ್ ಜೊತೆ 'ಕೈ' ಜೋಡಿಕೆಗೆ ವೇದಿಕೆ ಸಿದ್ದ
ಜಗ್ಗೇಶ್ ವಿರುದ್ಧ ದೂರು ದಾಖಲು
ಮೈಸೂರಿನ ಬಂಧಿತರು ಉಗ್ರರಲ್ಲ:ಪೊಲೀಸ್ ಸ್ಪಷ್ಟನೆ