ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮೆವರಿಕ್‌‌ನಿಂದ‌ ಸಿಎಂಗೆ 'ಉಡುಗೊರೆ':ಎಚ್‌ಡಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೆವರಿಕ್‌‌ನಿಂದ‌ ಸಿಎಂಗೆ 'ಉಡುಗೊರೆ':ಎಚ್‌ಡಿಕೆ
ಆರ್ಥಿಕವಾಗಿ ಹಿಂದುಳಿದವರಿಗೆ ಮನೆಗಳನ್ನು ನಿರ್ಮಿಸಿ ಕೊಡಲು ಬೆಂಗಳೂರಿನ ಈಜಿಪುರ ಬಡಾವಣೆಯ ಜಾಗವನ್ನು ಮೆವರಿಕ್ ಹೋಲ್ಡಿಂಗ್ಸ್‌‌ಗೆ ಗುತ್ತಿಗೆ ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೋಟ್ಯಂತರ ರೂ.ಗಳ ಕೊಡುಗೆ ಪಡೆದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ತಮ್ಮಲ್ಲಿ ಸಾಕ್ಷ್ಯಾಧಾರಗಳಿದ್ದು, ಅವುಗಳನ್ನು ಬಹಿರಂಗಗೊಳಿಸಲು ಸಿದ್ಧನಿದ್ದೇನೆ ಎಂದು ಮುಖ್ಯಮಂತ್ರಿಗೆ ಸವಾಲೆಸೆದರು. ಮೆವರಿಕ್ ಸಂಸ್ಥೆಗೆ ತರಾತುರಿಯಲ್ಲಿ ಈ ಗುತ್ತಿಗೆ ನೀಡುವ ಕ್ರಮ ಕೈಗೊಳ್ಳುವಲ್ಲಿ ಮುಖ್ಯಮಂತ್ರಿ ಹಾಗೂ ನಗರಾಭಿವೃದ್ದಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ನೇರ ಪಾತ್ರವಿದೆ. ವಿಧಾನ ಮಂಡಲದ ವಿಶೇಷ ಅಧಿವೇಶನ ಕರೆದರೆ ಎಲ್ಲವನ್ನೂ ಬಹಿರಂಗಗೊಳಿಸಲು ಸಿದ್ಧ ಎಂದರು.

ಬೆಂಗಳೂರಿನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಕ್ಷ ಕಟ್ಟಲು ಸಾರ್ವಜನಿಕರಿಂದ ದೇಣಿಗೆ ಸ್ವೀಕರಿಸುವಂತೆ ವೆಂಕಯ್ಯನಾಯ್ಡು ಸೂಚನೆ ನೀಡಿದ್ದರು. ಅದನ್ನು ತಪ್ಪಾಗಿ ಅರ್ಥೈಸಿಕೊಂಡ ಯಡಿಯೂರಪ್ಪ ಈಜಿಪುರದ ಗೋಲ್‌‌ಮಾಲ್ ಮೂಲಕ ಚಂದಾ ಎತ್ತುತ್ತಿರಬೇಕು ಎಂದು ಲೇವಡಿ ಮಾಡಿದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ಮೆವರಿಕ್ ಸಂಸ್ಥೆಯ ಮಾಲೀಕರು ಇದೇ ಯೋಜನೆಯನ್ನು ಹೊತ್ತು ಬಂದಿದ್ದರು. 30 ಕೋಟಿ ರೂ.ಗಳ ಲಂಚ ನೀಡುವುದಾಗಿಯೂ ಹೇಳಿದರು. ಆದರೆ ನಾನು ಒಪ್ಪಿರಲಿಲ್ಲ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅ.7ಕ್ಕೆ ರೈತರಿಂದ ಬೃಹತ್ ಪ್ರತಿಭಟನೆ
ದಸರಾಕ್ಕೆ ಸಿದ್ದಗಂಗಾಶ್ರೀ ಚಾಲನೆ
ಅನಗತ್ಯ ಕ್ಯಾಬಿನೆಟ್ ದರ್ಜೆ ಸೃಷ್ಟಿ: ಕುಮಾರಸ್ವಾಮಿ
ಗೋಳಗುಮ್ಮಟ-ಆಲಮಟ್ಟಿ ಸ್ಫೋಟಕ್ಕೆ ಸಂಚು !
ಜೆಡಿಎಸ್ ಜೊತೆ 'ಕೈ' ಜೋಡಿಕೆಗೆ ವೇದಿಕೆ ಸಿದ್ದ
ಜಗ್ಗೇಶ್ ವಿರುದ್ಧ ದೂರು ದಾಖಲು