ಚರ್ಚ್,ಪ್ರಾರ್ಥನಾ ಮಂದಿರಗಳ ಮೇಲಿನ ದಾಳಿಯನ್ನು ಖಂಡಿಸುವ ಬುದ್ದಿಜೀವಿಗಳು ಬಲವಂತದ ಮತಾಂತರವನ್ನು ಏಕೆ ಖಂಡಿಸುತ್ತಿಲ್ಲ ಎಂದು ಸಾಹಿತಿ-ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಲವಂತದ ಮತಾಂತರವನ್ನು ಖಂಡಿಸುತ್ತೇವೆ ಎಂದಷ್ಟೇ ಹೇಳುವ ಬುದ್ದಿಜೀವಿಗಳು ಹಣದಾಮಿಷ ತೋರಿಸಿ ಮತಾಂತರ ಮಾಡುವವರ ವಿರುದ್ಧ ಏಕೆ ಧ್ವನಿ ಎತ್ತುತ್ತಿಲ್ಲ. ಕ್ರಿಶ್ಚಿಯನ್ನರು ಒಂದು ಕುಟುಂಬಕ್ಕೆ 25 ಸಾವಿರ ರೂ. ನೀಡಿ ಪ್ರಚೋದಿಸುತ್ತಿದ್ದಾರೆ. ಇದು ಬಲವಂತದ ಮತಾಂತರ ಅಲ್ಲವೇ ಎಂದು ಅವರು ಪ್ರಶ್ನಿಸಿದರು.
ನಗರದ ಮಹಾತ್ಮಾಗಾಂಧಿ ಪ್ರತಿಮೆ ಬಳಿ ಮತಾಂತರ ವಿರೋಧಿಸಿ ಅವರು ಸಮಾನ ಮನಸ್ಕರೊಡನೆ ಪ್ರತಿಭಟನೆ ನಡೆಸಿದರು. ಚರ್ಚ್ ಮೇಲಿನ ದಾಳಿಗಳನ್ನು ಖಂಡಿಸುವ ಬುದ್ದಿಜೀವಿಗಳ ಹೇಳಿಕೆಗಳಿಂದಲೇ ದಾಳಿಗಳು ಹೆಚ್ಚುತ್ತಿವೆ. ಇದನ್ನೇ ಬಂಡವಾಳ ಮಾಡಿಕೊಂಡ ರಾಜಕಾರಣಿಗಳು ಮತಗಳಿಗಾಗಿ ಹಿಂದೂ ಸಂಘಟನೆಗಳ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಭಾರತ ವ್ಯಭಿಚಾರಿ ದೈವಗಳನ್ನು ನಂಬುತ್ತದೆ ಎಂದು ಕ್ರೈಸ್ತ ಪಾದ್ರಿಗಳು ಪ್ರಚಾರ ಮಾಡುತ್ತಿದ್ದಾರೆ. ಹಿಂದೂ ಸಹನೆಗೂ ಒಂದು ಮಿತಿ ಇದೆ ಎಂದು ಎಚ್ಚರಿಸಿದರು. |
|