ಸ್ಪೀಡ್ ಗವರ್ನರ್ ಅಳವಡಿಕೆ ವಿರೋಧಿಸಿ ಕರೆಯಲಾಗಿದ್ದ ಮುಷ್ಕರವನ್ನು ಲಾರಿ ಮಾಲೀಕರ ಒಕ್ಕೂಟ ವಾಪಾಸ್ ಪಡೆದುಕೊಂಡಿದೆ.
ರಾಜ್ಯದ ಎಲ್ಲಾ ಹಳೆಯ ಲಾರಿಗಳು, ಟ್ಯಾಕ್ಸಿಗಳು, ಮ್ಯಾಕ್ಸಿಕ್ಯಾಬ್‌ಗಳು ಮತ್ತಿತರ ವಾಣಿಜ್ಯ ವಾಹನಗಳಿಗೆ ರಾಜ್ಯ ಹೈಕೋರ್ಟ್ ನೀಡಿರುವ ಗಡುವನ್ನು ಸುಪ್ರಿಂಕೋರ್ಟ್ ಒಂದು ತಿಂಗಳು ವಿಸ್ತರಿಸಿರುವ ಹಿನ್ನೆಲೆಯಲ್ಲಿ ಮುಷ್ಕರವನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತ ಮುಂದಿನ ವಿಚಾರಣೆಯನ್ನು ಸುಪ್ರಿಂಕೋರ್ಟ್ ಡಿಸೆಂಬರ್‌ಗೆ ಮುಂದೂಡಿದೆ.
ಏತನ್ಮಧ್ಯೆ, ಸ್ಪೀಡ್ ಗವರ್ನರ್ ಅಳವಡಿಕೆ ವಿಷಯದಲ್ಲಿ ಲಾರಿ ಮಾಲೀಕರ ಪರವಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ. ಈ ನಿಟ್ಟಿನಲ್ಲಿಯೂ ಮಂಗಳವಾರ ಮಧ್ಯರಾತ್ರಿಯಿಂದ ರಾಜ್ಯಾದ್ಯಂತ ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು ಲಾರಿ ಮಾಲೀಕರು ಕೈ ಬಿಟ್ಟಿದ್ದಾರೆ.
ರಾಜ್ಯದ ಎಲ್ಲಾ ವಾಣಿಜ್ಯ ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಕೆ ಕಡ್ಡಾಯವಾಗಿ ಜಾರಿ ಮಾಡಲು ಹೈಕೋರ್ಟ್ ನೀಡಿದ್ದ 3 ತಿಂಗಳ ಕಾಲಾವಕಾಶ ಮಂಗಳವಾರ ಕೊನೆಗೊಂಡಿತ್ತು. ಈ ನಿಟ್ಟಿನಲ್ಲಿ ಲಾರೀ ಮಾಲೀಕರ ಒಕ್ಕೂಟ ಮುಷ್ಕರ ನಡೆಸಲು ತೀರ್ಮಾನಿಸಿತ್ತು. |
|