ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮೈಸೂರು: ಒಡೆಯರ್ 'ದರ್ಬಾರ್'ಗೆ ಚಾಲನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೈಸೂರು: ಒಡೆಯರ್ 'ದರ್ಬಾರ್'ಗೆ ಚಾಲನೆ
NRB
ಐತಿಹಾಸಿಕ ದಸರಾ ಉತ್ಸವದ ಅಂಗವಾಗಿ ಅರಮನೆಯ ದರ್ಬಾರ್ ಹಾಲ್‌ನಲ್ಲಿ ನವರಾತ್ರಿಯ ಒಂಬತ್ತು ದಿನಗಳ ಕಾಲ ನಡೆಯುವ ಖಾಸಗಿ ದರ್ಬಾರ್‌ಗೆ ಮಂಗಳವಾರ ಬೆಳಿಗ್ಗೆ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಚಾಲನೆ ನೀಡಿದರು.

ಸಂಪ್ರದಾಯದಂತೆ ವಜ್ರಖಚಿತ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ ಸಿಂಹಾಸನಾರೂಢರಾದರು. ಸುಮಾರು 20 ನಿಮಿಷಗಳ ಕಾಲ ಖಾಸಗಿ ದರ್ಬಾರ್ ನಡೆಸಿ ಹಿಂದಿನ ರಾಜಮನೆತನದ ವೈಭವ, ಆಡಳಿತ, ಸಂಪ್ರದಾಯದ ನೆನಪನ್ನು ಮರುಕಳಿಸುವಂತೆ ಮಾಡಿದರು.

ಸಿಂಹಾಸನಾರೂಢರಾಗುವ ಮೊದಲು ಅವರು ರಾಜ ಪುರೋಹಿತರ ಮಾರ್ಗದರ್ಶನದಲ್ಲಿ ಗಣಪತಿ ಪೂಜೆ, ನವಗ್ರಹ ಪೂಜೆ, ದೇವಿ ಪೂಜೆ, ಸಿಂಹಾಸನದಲ್ಲಿರುವ ಸಿಂಹಾದ್ರಿಯ ಪೂಜೆ ಕೈಗೊಂಡರು.

ಸಿಂಹಾಸನಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ ನಮಿಸಿ ಸಿಂಹಾಸನದ ಏಳು ಸೋಪಾನಗಳನ್ನು ಆರೋಹಣ ಮಾಡಿ ಕೂರ್ಮಾಸನದಲ್ಲಿ ಆಸೀನರಾದರು.

ಖಾಸಗಿ ದರ್ಬಾರ್ ನವರಾತ್ರಿಯ ಒಂಬತ್ತೂ ದಿನಗಳ ಸಂಜೆ ವೇಳೆ ನಡೆಯಲಿದೆ. ಸುಮಾರು 250ಕೆಜಿ ತೂಕದ ಚಿನ್ನದ ಸಿಂಹಾಸನವನ್ನು ದಸರಾ ಉತ್ಸವ ಸಂದರ್ಭದಲ್ಲಿ ಮಾತ್ರ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗಡುವು ವಿಸ್ತರಣೆ: ಲಾರಿ ಮುಷ್ಕರ ವಾಪಸ್
ಬಿಬಿಎಂಪಿ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ತಾತ್ಕಾಲಿಕ ಲೋಡ್‌ ಶೆಡ್ಡಿಂಗ್: ಈಶ್ವರಪ್ಪ
ಮತಾಂತರವನ್ನೇಕೆ ಖಂಡಿಸುತ್ತಿಲ್ಲ: ಚಿ.ಮೂ. ಕಿಡಿ
ಇಂದು ಮಧ್ಯರಾತ್ರಿಯಿಂದ ಲಾರಿ ಮುಷ್ಕರ
ಕಾಂಗ್ರೆಸ್‌ ಬಾಗಿಲು ತಟ್ಟುತ್ತಿರುವ ಗೌಡರು: ಕಟ್ಟಾ